0:00
0:00

ಅಧ್ಯಾಯ 95

ಬನ್ನಿರಿ, ಕರ್ತನಿಗೆ ಉತ್ಸಾಹ ಧ್ವನಿಮಾಡುವಾ ನಮ್ಮ ರಕ್ಷಣೆಯ ಬಂಡೆಗೆ ಜಯಧ್ವನಿ ಮಾಡೋಣ.
2 ಸ್ತೋತ್ರದಿಂದ ಆತನ ಸನ್ನಿಧಿಯ ಮುಂದೆ ಬಂದು ಕೀರ್ತನೆಗಳಿಂದ ಆತನಿಗೆ ಆನಂದದ ಧ್ವನಿಮಾಡೋಣ.
3 ಕರ್ತನು ದೊಡ್ಡ ದೇವರೂ ಎಲ್ಲಾ ದೇವರುಗಳ ಮೇಲೆ ದೊಡ್ಡ ಅರಸನೂ ಆಗಿದ್ದಾನೆ.
4 ಆತನ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಅವೆ; ಬೆಟ್ಟಗಳ ಬಲವು ಆತನದೇ.
5 ಸಮುದ್ರವು ಆತನದು; ಆತನು ಅದನ್ನು ಮಾಡಿದನು; ಆತನ ಕೈಗಳು ಒಣಭೂಮಿಯನ್ನು ರೂಪಿಸಿದವು.
6 ಬನ್ನಿರಿ, ನಮ್ಮನ್ನು ಉಂಟುಮಾಡಿದ ಕರ್ತನ ಮುಂದೆ ಮೊಣಕಾಲು ಊರೋಣ ಆತನಿಗೆ ಎರಗಿ ಆರಾಧಿಸೋಣ.
7 ಆತನು ನಮ್ಮ ದೇವರು; ನಾವು ಆತನು ಮೇಯಿಸುವ ಜನರೂ ಆತನ ಕೈ ಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಸ್ವರವನ್ನು ಕೇಳಿದರೆ
8 ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ.
9 ಅಲ್ಲಿ ನಿಮ್ಮ ತಂದೆಗಳು ನನ್ನನ್ನು ಶೋಧಿಸಿ, ಪರೀಕ್ಷಿಸಿದರು; ನನ್ನ ಕೆಲಸವನ್ನು ನೋಡಿದರು.
10 ನಾಲ್ವತ್ತು ವರುಷ ಆ ಸಂತತಿಗೆ ಬೇಸರಗೊಂಡು--ಇವರು ತಮ್ಮ ಹೃದಯ ದಲ್ಲಿ ತಪ್ಪಿ ಹೋಗುವ ಜನರಾಗಿದ್ದಾರೆ; ನನ್ನ ಮಾರ್ಗ ಗಳನ್ನು ಅವರು ಅರಿಯರು ಅಂದೆನು.
11 ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು.