0:00
0:00

ಅಧ್ಯಾಯ 123

ಪರಲೋಕದಲ್ಲಿ ವಾಸವಾಗಿರುವಾತನೇ, ನಿನ್ನ ಕಡೆಗೆ ನನ್ನ ಕಣ್ಣುಗಳನ್ನು ಎತ್ತುತ್ತೇನೆ.
2 ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನೂ ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರವೇ, ನಮ್ಮ ದೇವರಾದ ಕರ್ತನು ನಮ್ಮನ್ನು ಕರುಣಿಸುವ ವರೆಗೆ ಆತನನ್ನೇ ನಿರೀಕ್ಷಿಸುತ್ತವೆ.
3 ನಮ್ಮನ್ನು ಕರುಣಿಸು; ಓ ಕರ್ತನೇ, ನಮ್ಮನ್ನು ಕರುಣಿಸು; ಬಹಳವಾಗಿ ತಿರ ಸ್ಕಾರದಿಂದ ತುಂಬಿದ್ದೇವೆ.
4 ಭೋಗಿಗಳ ಹಾಸ್ಯದಿಂದ ನಮ್ಮ ಹೃದಯವು ತುಂಬಿಯದೆ, ಗರ್ವಿಷ್ಟರ ನಿಂದೆ ಯಿಂದ ನಮ್ಮ ಮನಸ್ಸು ಬೇಸತ್ತು ಹೋಯಿತು.