0:00
0:00

ಅಧ್ಯಾಯ 131

ಕರ್ತನೇ, ನನ್ನ ಹೃದಯವು ಗರ್ವದ್ದಲ್ಲ; ನನ್ನ ಕಣ್ಣುಗಳು ಅಹಂಭಾವ ದವುಗಳೂ ಅಲ್ಲ; ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ನಡೆದುಕೊಳ್ಳು ವದಿಲ್ಲ.
2 ಮೊಲೆ ಬಿಡಿಸಿದ ಕೂಸು ತನ್ನ ತಾಯಿಯ ಬಳಿಯಲ್ಲಿ ಇರುವ ಪ್ರಕಾರ ನಿಶ್ಚಯವಾಗಿ ನನ್ನನ್ನು ಸಂತೈಸಿಕೊಂಡು ಮೌನವಾಗಿದ್ದೇನೆ; ನನ್ನ ಪ್ರಾಣವು ಮೊಲೆ ಬಿಡಿಸಿದ ಕೂಸಿನ ಹಾಗೆ ನನ್ನ ಬಳಿಯಲ್ಲಿ ಅದೆ.
3 ಇಸ್ರಾಯೇಲು ಈಗಿನಿಂದ ಯುಗಯುಗಕ್ಕೂ ಕರ್ತನನ್ನು ಎದುರುನೋಡಲಿ.