ಅಧ್ಯಾಯ 38

ಮತ್ತಾನನ ಮಗನಾದ ಶೆಫತ್ಯನೂ ಷಷ್ಹೂರನ ಮಗನಾದ ಗೆದಲ್ಯನೂ ಸೆಲ್ಯೆಮನ ಮಗನಾದ ಯೂಕಲನೂ ಮಲ್ಕೀಯನ ಮಗನಾದ ಪಷ್ಹೂರನೂ ಯೆರೆವಿಾಯನು ಜನರೆಲ್ಲರಿಗೆ ಹೇಳಿದ ಮಾತುಗಳನ್ನು ಕೇಳಿದರು; ಅವು ಯಾವವೆಂದರೆ--
2 ಕರ್ತನು ಹೀಗೆ ಹೇಳುತ್ತಾನೆ--ಈ ಪಟ್ಟಣದಲ್ಲಿ ನಿಲ್ಲುವವನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಸಾಯುವನು; ಆದರೆ ಕಸ್ದೀಯರ ಬಳಿಗೆ ಹೊರಗೆ ಹೋಗುವವನು ಬದುಕುವನು; ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು;
3 ಅವನು ಬದುಕುವನು. ಕರ್ತನು ಹೇಳುವದೇನಂದರೆ--ಈ ಪಟ್ಟಣವು ನಿಶ್ಚಯವಾಗಿ ಬಾಬೆಲ್‌ ಅರಸನ ಸೈನ್ಯದ ಕೈಯಲ್ಲಿ ಒಪ್ಪಿಸಲ್ಪಡುವದು; ಅದು ಅದನ್ನು ವಶಮಾಡಿ ಕೊಳ್ಳುವದು.
4 ಆದದರಿಂದ ಆ ಪ್ರಧಾನರು ಅರಸನಿಗೆ --ಈ ಮನುಷ್ಯನು ಸಾಯಲಿ; ಯಾಕಂದರೆ ಇವನು ಇಂಥಾ ಮಾತುಗಳನ್ನು ಅವರ ಸಂಗಡ ಆಡಿ ಈ ಪಟ್ಟಣದಲ್ಲಿ ಉಳಿದ ಎಲ್ಲಾ ಯುದ್ಧಸ್ಥರ ಕೈಗಳನ್ನೂ ಎಲ್ಲಾ ಜನರ ಕೈಗಳನ್ನೂ ಬಲಹೀನ ಮಾಡುತ್ತಾನೆ; ಈ ಮನುಷ್ಯನು ಜನರ ಕ್ಷೇಮವನ್ನಲ್ಲ ಅವರ ಕೇಡನ್ನು ಹುಡುಕುತ್ತಾನೆಂದು ಹೇಳಿದನು.
5 ಆಗ ಅರಸನಾದ ಚಿದ್ಕೀಯನು ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡಬಲ್ಲವ ನಲ್ಲ ಅಂದನು.
6 ಆಗ ಅವರು ಯೆರೆವಿಾಯನನ್ನು ತಕ್ಕೊಂಡು ಸೆರೆಮನೆಯ ಅಂಗಳದಲ್ಲಿದ್ದ ಹಮ್ಮೇಲೆಕನ ಮಗನಾದ ಮಲ್ಕೀಯನ ಕುಣಿಯಲ್ಲಿ ಹಾಕಿದರು; ಅವರು ಯೆರೆವಿಾಯನನ್ನು ಹಗ್ಗಗಳಿಂದ ಇಳಿಸಿದರು; ಆ ಕುಣಿಯಲ್ಲಿ ನೀರು ಇರಲಿಲ್ಲ; ಕೆಸರು ಮಾತ್ರ ಇತ್ತು; ಯೆರೆವಿಾಯನು ಕೆಸರಿನಲ್ಲಿ ಮುಣುಗಿದನು.
7 ಆಗ ಅರಸನ ಮನೆಯಲ್ಲಿರುವ ಕಂಚುಕಿಯಾದ ಎಬೆದೆಲ್ಮೆಕನೆಂಬ ಕೂಷ್ಯನು ಯೆರೆವಿಾಯನನ್ನು ಅವರು ಕುಣಿಯಲ್ಲಿ ಹಾಕಿದರೆಂದು ಕೇಳಿದಾಗ ಅರಸನು ಬೆನ್ಯಾವಿಾನನ ಬಾಗಲಲ್ಲಿ ಕೂತಿರಲಾಗಿ,
8 ಎಬೆದ್ಮೆಲೆ ಕನು ಅರಸನ ಮನೆಯಿಂದ ಹೊರಟು ಅರಸನ ಸಂಗಡ ಮಾತ ನಾಡಿ ಹೇಳಿದ್ದೇನಂದರೆ--
9 ಅರಸನಾದ ನನ್ನೊ ಡೆಯನೇ, ಈ ಮನುಷ್ಯರು ಕುಣಿಯಲ್ಲಿ ಹಾಕಿದ ಪ್ರವಾ ದಿಯಾದ ಯೆರೆವಿಾಯನಿಗೆ ಮಾಡಿದ್ದೆಲ್ಲಾ ಕೇಡಿಗಾಗಿ ಮಾಡಿದ್ದಾರೆ; ಅವನು ಇರುವಲ್ಲಿ ಹಸಿವೆಯಿಂದ ಸಾಯುವವನಾಗಿದ್ದಾನೆ;
10 ಪಟ್ಟಣದಲ್ಲಿ ಇನ್ನು ಮೇಲೆ ರೊಟ್ಟಿ ಇಲ್ಲ ಅಂದನು. ಆಗ ಅರಸನು ಕೂಷ್ಯನಾದ ಎಬೆದ್ಮೆಲೆಕನಿಗೆ ನೀನು ಇಲ್ಲಿಂದ ಮೂವತ್ತು ಮಂದಿ ಮನುಷ್ಯರನ್ನು ಕರಕೊಂಡು ಹೋಗಿ ಪ್ರವಾದಿಯಾದ ಯೆರೆವಿಾಯನನ್ನು ಅವನು ಸಾಯುವದಕ್ಕಿಂತ ಮುಂಚೆ ಕುಣಿಯೊಳಗಿಂದ ಎತ್ತೆಂದು ಆಜ್ಞಾಪಿಸಿದನು.
11 ಆಗ ಎಬೆದ್ಮೆಲೆಕನು ಆ ಮನುಷ್ಯರನ್ನು ಕರಕೊಂಡು ಖಜಾನೆ ಕೆಳಗಿರುವ ಅರಮನೆಗೆ ಹೋಗಿ ಅಲ್ಲಿಂದ ಹರಿದು ಹೋದ ಹಳೇ ಬಟ್ಟೆಗಳನ್ನೂ ಸವೆದು ಹೋದ ಹಳೇ ವಸ್ತ್ರಗಳನ್ನೂ ತಕ್ಕೊಂಡು ಅವುಗಳನ್ನು ಹಗ್ಗಗಳಿಂದ ಯೆರೆವಿಾಯನ ಬಳಿಗೆ ಕುಣಿಯೊಳಗೆ ಇಳಿಸಿದನು.
12 ಕೂಷ್ಯನಾದ ಎಬೆದ್ಮೆಲೆಕನು ಯೆರೆವಿಾಯನಿಗೆ-- ಹರಿದು ಸವೆದು ಹೋದ ಈ ಹಳೇಬಟ್ಟೆಗಳನ್ನು ಹಗ್ಗಗಳ ಕೆಳಗೆ ನಿನ್ನ ಕಂಕಳುಗಳಲ್ಲಿ ಇಟ್ಟುಕೋ ಅಂದನು; ಯೆರೆ ವಿಾಯನು ಹಾಗೆ ಮಾಡಿದನು.
13 ಹೀಗೆ ಹಗ್ಗಗಳಿಂದ ಯೆರೆವಿಾಯನನ್ನು ಎಳೆದು ಅವನನ್ನು ಕುಣಿಯೊಳಗಿಂದ ಎತ್ತಿದರು; ಆಮೇಲೆ ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಉಳಿದನು.
14 ಆಗ ಅರಸನಾದ ಚಿದ್ಕೀಯನು ಪ್ರವಾದಿಯಾದ ಯೆರೆವಿಾಯನನ್ನು ತನ್ನ ಬಳಿಗೆ ಕರೆಯಿಸಿ ಕರ್ತನ ಆಲಯದಲ್ಲಿರುವ ಮೂರನೇ ಪ್ರವೇಶಕ್ಕೆ ಕರಕೊಂಡು ಹೋದನು. ಆಗ ಅರಸನು ಯೆರೆವಿಾಯನಿಗೆ--ನಾನು ನಿನ್ನಿಂದ ಒಂದು ಕೇಳುತ್ತೇನೆ, ನನಗೆ ಯಾವದನ್ನಾದರೂ ಬಚ್ಚಿಡಬೇಡ ಅಂದನು.
15 ಆಗ ಯೆರೆವಿಾಯನು ಚಿದ್ಕೀಯನಿಗೆ--ನಾನು ನಿನಗೆ ತಿಳಿಸಿದರೆ ನೀನು ನನ್ನನ್ನು ನಿಶ್ಚಯವಾಗಿ ಕೊಂದು ಹಾಕುವದಿಲ್ಲವೋ? ನಾನು ನಿನಗೆ ಆಲೋಚನೆ ಹೇಳಿದರೆ ನೀನು ಕೇಳುವದಿಲ್ಲ ಅಂದನು.
16 ಹೀಗೆ ಅರಸನಾದ ಚಿದ್ಕೀಯನು ಯೆರೆ ವಿಾಯನಿಗೆ ಅಂತರಂಗದಲ್ಲಿ ಪ್ರಮಾಣ ಮಾಡಿ --ನಮಗೆ ಈ ಪ್ರಾಣವನ್ನುಂಟು ಮಾಡಿದ ಕರ್ತನ ಜೀವದಾಣೆ; ನಾನು ನಿನ್ನನ್ನು ಕೊಂದು ಹಾಕುವದಿಲ್ಲ; ನಿನ್ನ ಪ್ರಾಣವನ್ನು ಹುಡುಕುವ ಈ ಮನುಷ್ಯರ ಕೈಯಲ್ಲಿ ಒಪ್ಪಿಸುವದಿಲ್ಲ ಅಂದನು.
17 ಆಗ ಯೆರೆವಿಾಯನು ಚಿದ್ಕೀಯನಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿಶ್ಚಯ ವಾಗಿ ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋದರೆ ನಿನ್ನ ಪ್ರಾಣವು ಬದುಕುವದು. ಈ ಪಟ್ಟಣವು ಬೆಂಕಿಯಿಂದ ಸುಡ ಲ್ಪಡುವದಿಲ್ಲ; ಮತ್ತು ನೀನೂ ನಿನ್ನ ಮನೆಯವರೂ ಬದುಕುವಿರಿ.
18 ನೀನು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋಗದಿದ್ದರೆ ಈ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಡುವದು; ಅವರು ಅದನ್ನು ಬೆಂಕಿಯಿಂದ ಸುಡುವರು; ನೀನು ಅವರ ಕೈಯಿಂದ ತಪ್ಪಿಸಿಕೊಳ್ಳುವದಿಲ್ಲ ಅಂದನು.
19 ಆಗ ಅರಸನಾದ ಚಿದ್ಕೀಯನು ಯೆರೆವಿಾಯನಿಗೆ--ನಾನು ಕಸ್ದೀಯರಿಗೆ ಒಳಬಿದ್ದ ಯೆಹೂದ್ಯರ ವಿಷಯ ಅಂಜು ತ್ತೇನೆ; ಒಂದು ವೇಳೆ ಅವರು ನನ್ನನ್ನು ಅವರ ಕೈಯಲ್ಲಿ ಒಪ್ಪಿಸಿಯಾರು.
20 ಆಗ ಅವರು ನನ್ನನ್ನು ಅಪಹಾಸ್ಯ ಮಾಡುವರು ಅಂದನು. ಆದರೆ ಯೆರೆವಿಾಯನು ಹೇಳಿದ್ದೇನಂದರೆ --ಅವರು ನಿನ್ನನ್ನು ಒಪ್ಪಿಸುವದಿಲ್ಲ; ನಾನು ನಿನಗೆ ಹೇಳುವ ಕರ್ತನ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೇದಾಗುವದು; ನಿನ್ನ ಪ್ರಾಣ ಬದುಕು ವದು.
21 ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--
22 ಇಗೋ, ಯೆಹೂದದ ಅರಸನ ಮನೆ ಯಲ್ಲಿ ಉಳಿದ ಹೆಂಗಸರೆಲ್ಲರು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ತರಲ್ಪಟ್ಟು ಹೇಳುವದೇ ನಂದರೆ--ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ, ನಿನ್ನನ್ನು ಗೆದ್ದಿದ್ದಾರೆ; ನಿನ್ನ ಕಾಲುಗಳು ಕೆಸರಿನಲ್ಲಿ ಮುಳುಗಿವೆ; ಆದರೆ ಅವರು ಹಿಂಜರಿದಿದ್ದಾರೆ.
23 ಹಾಗೆ ನಿನ್ನ ಹೆಂಡತಿಯರೆಲ್ಲರನ್ನೂ ನಿನ್ನ ಮಕ್ಕಳನ್ನೂ ಕಸ್ದೀಯರ ಬಳಿಗೆ ತರುವರು; ನೀನು ಅವರ ಕೈಗೆ ತಪ್ಪಿಸಿಕೊಳ್ಳು ವದಿಲ್ಲ; ಬಾಬೆಲಿನ ಅರಸನ ಕೈಯಿಂದ ಹಿಡಿಯಲ್ಪ ಡುವಿ; ಈ ಪಟ್ಟಣವನ್ನು ನೀನೇ ಬೆಂಕಿಯಿಂದ ಸುಡುವಿ ಅಂದನು.
24 ಆಗ ಚಿದ್ಕೀಯನು ಯೆರೆವಿಾಯನಿಗೆ ಹೇಳಿದ್ದೇನಂದರೆ--ನೀನು ಸಾಯದ ಹಾಗೆ ಈ ಮಾತುಗಳನ್ನು ಯಾರಿಗೂ ತಿಳಿಸಬಾರದು.
25 ಆದರೆ ಪ್ರಧಾನರು ನಾನು ನಿನ್ನ ಸಂಗಡ ಮಾತಾಡಿ ದ್ದೇನೆಂದು ಕೇಳಿ ನಿನ್ನ ಬಳಿಗೆ ಬಂದು--ನೀನು ಅರಸನಿಗೆ ಹೇಳಿದ್ದನ್ನು ನಮಗೆ ಮರೆಮಾಡದೆ ತಿಳಿಸು; ನಾವು ನಿನ್ನನ್ನು ಕೊಂದುಹಾಕುವದಿಲ್ಲ; ಅರಸನು ನಿನ್ನ ಸಂಗಡ ಮಾತಾ ಡಿದ್ದನ್ನು ಸಹ ತಿಳಿಸು ಎಂದು ಹೇಳಿದರೆ--
26 ನೀನು ಅವರಿಗೆ--ನನ್ನನ್ನು ತಿರುಗಿ ಯೋನಾತಾನನ ಮನೆಯಲ್ಲಿ ಸಾಯುವ ಹಾಗೆ ತಕ್ಕೊಂಡು ಹೋಗ ಬೇಡವೆಂದು ಅರಸನ ಮುಂದೆ ಬಿನ್ನಹ ಮಾಡಿದೆನೆಂದು ಹೇಳು ಅಂದನು.
27 ಆಗ ಪ್ರಧಾನರೆಲ್ಲರೂ ಯೆರೆವಿಾಯನ ಬಳಿಗೆ ಬಂದು ಅವನನ್ನು ಕೇಳಿದರು. ಅವನು ಅರಸನು ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು; ಆಗ ಅವರು ಸುಮ್ಮನಾದರು; ಆ ಕಾರ್ಯದ ವಿಷಯ ವನ್ನು ಅವರು ಗ್ರಹಿಸಲಿಲ್ಲ.
28 ಈ ಪ್ರಕಾರ ಯೆರೂ ಸಲೇಮು ಹಿಡಿಯಲ್ಪಡುವ ದಿವಸದ ವರೆಗೆ ಯೆರೆ ವಿಾಯನು ಸೆರೆಮನೆಯ ಅಂಗಳದಲ್ಲಿ ವಾಸವಾ ಗಿದ್ದನು; ಯೆರೂಸಲೇಮು ಹಿಡಿಯಲ್ಪಡುವಾಗ ಅವನು ಅಲ್ಲೇ ಇದ್ದನು.