ಅಧ್ಯಾಯ 36

ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೇ ವರುಷದಲ್ಲಿ ಆದದ್ದೇನಂದರೆ--ಯೆರೆವಿಾಯ ನಿಗೆ ಕರ್ತನಿಂದ ಈ ವಾಕ್ಯ ಉಂಟಾಯಿತು, ಯಾವ ದಂದರೆ--
2 ಪುಸ್ತಕದ ಸುರಳಿಯನ್ನು ತಕ್ಕೊಂಡು ನಾನು ಇಸ್ರಾಯೇಲಿಗೂ ಯೆಹೂದಕ್ಕೂ ಎಲ್ಲಾ ಜನಾಂಗ ಗಳಿಗೂ ವಿರೋಧವಾಗಿ ನಿನ್ನ ಸಂಗಡ ಮಾತಾಡಿ ದಂದಿನಿಂದ ಯೋಷೀಯನ ದಿನಗಳು ಮೊದಲು ಗೊಂಡು ಈ ದಿನದ ವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
3 ಒಂದು ವೇಳೆ ಯೆಹೂ ದದ ಮನೆತನದವರು ನಾನು ಅವರಿಗೆ ಮಾಡುವದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು ಅಂದನು.
4 ಆಗ ಯೆರೆವಿಾಯನು ನೇರೀಯನ ಮಗನಾದ ಬಾರೂಕನನ್ನು ಕರೆದನು; ಬಾರೂಕನು ಯೆರೆವಿಾಯನ ಬಾಯಿಂದ ಕರ್ತನು ಅವನಿಗೆ ಹೇಳಿದ್ದ ಮಾತು ಗಳನ್ನೆಲ್ಲಾ ಕೇಳಿ ಪುಸ್ತಕದ ಸುರಳಿಯಲ್ಲಿ ಬರೆ ದನು.
5 ಆಮೇಲೆ ಯೆರೆವಿಾಯನು ಬಾರೂಕನಿಗೆ ಆಜ್ಞಾಪಿ ಸಿದ್ದೇನಂದರೆ--ನಾನು ಸೆರೆಯಲ್ಲಿಡಲ್ಪಟ್ಟಿದ್ದೇನೆ, ಕರ್ತನ ಆಲಯಕ್ಕೆ ಹೋಗಲಾರೆನು.
6 ಆದದರಿಂದ ನೀನು ಹೋಗಿ ನನ್ನ ಬಾಯಿಂದ ಕೇಳಿ ನೀನು ಬರೆದ ಸುರಳಿಯಲ್ಲಿ ಕರ್ತನ ಆಲಯದೊಳಗೆ ಉಪವಾಸದ ದಿವಸದಲ್ಲಿ ಕರ್ತನ ವಾಕ್ಯಗಳನ್ನು ಜನರಿಗೆ ಕೇಳುವಂತೆ ಓದಿ ಹೇಳು ಮತ್ತು ತಮ್ಮ ಪಟ್ಟಣಗಳಿಂದ ಬರುವ ಯೆಹೂದದವರೆಲ್ಲರೂ ಕೇಳುವಂತೆಯೂ ಅವುಗಳನ್ನು ಓದಿ ಹೇಳಬೇಕು.
7 ಒಂದು ವೇಳೆ ಅವರ ವಿಜ್ಞಾಪನೆ ಕರ್ತನ ಮುಂದೆ ಬಂದೀತು; ಅವರು ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು; ಕರ್ತನು ಈ ಜನರಿಗೆ ವಿರೋಧವಾಗಿ ಪ್ರಕಟಿಸಿರುವ ಕೋಪವೂ ಉರಿಯೂ ಅಪಾರವಾಗಿದೆ ಅಂದನು.
8 ಆಗ ಪ್ರವಾದಿ ಯಾದ ಯೆರೆವಿಾಯನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಬಾರೂಕನು ಮಾಡಿ ಕರ್ತನ ವಾಕ್ಯಗಳನ್ನು ಪುಸ್ತಕ ದಿಂದ ಕರ್ತನ ಆಲಯದಲ್ಲಿ ಓದಿದನು.
9 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾ ಕೀಮನ ಐದನೇ ವರುಷದ ಒಂಭತ್ತನೇ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿರುವ ಎಲ್ಲಾ ಜನರಿಗೂ ಯೆಹೂದದ ಪಟ್ಟಣಗಳಿಂದ ಯೆರೂಸಲೇಮಿಗೆ ಬಂದ ಜನರೆಲ್ಲರಿಗೂ ಕರ್ತನ ಸನ್ನಿಧಿಯಲ್ಲಿ ಉಪವಾಸವನ್ನು ಸಾರಿದರು.
10 ಆಗ ಬಾರೂಕನು ಪುಸ್ತಕದಿಂದ ಯೆರೆ ವಿಾಯನ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಲೇಖಕ ನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೊಠಡಿ ಯಲ್ಲಿ, ಮೇಲಿನ ಅಂಗಳದಲ್ಲಿ, ಕರ್ತನ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರ ಕಿವಿಗಳಲ್ಲಿ ಓದಿ ಹೇಳಿದನು.
11 ಶಾಫಾನನ ಮಗನಾದ ಗೆಮ ರ್ಯನ ಮಗನಾದ ವಿಾಕಾಯನು ಕರ್ತನ ವಾಕ್ಯಗಳ ನ್ನೆಲ್ಲಾ ಆ ಪುಸ್ತಕದ ಮೇರೆಗೆ ಕೇಳಿದ ತರುವಾಯ ಅವನು ಅರಸನ ಮನೆಗೆ,
12 ಲೇಖಕನ ಕೊಠಡಿಗೆ ಇಳಿದು ಹೋದನು; ಅಗೋ, ಅಲ್ಲಿ ಪ್ರಧಾನರೆಲ್ಲರು ಕೂತುಕೊಂಡಿದ್ದರು; ಯಾರಂದರೆ--ಲೇಖಕನಾದ ಎಲೀಷಾಮನೂ ಶೆಮಾಯನ ಮಗನಾದ ದೆಲಾ ಯನೂ ಅಕ್ಬೋರನ ಮಗನಾದ ಎಲ್ನಾಥಾನೂ ಶಾಫಾ ನನ ಮಗನಾದ ಗೆಮರ್ಯನೂ ಹನನೀಯನ ಮಗ ನಾದ ಚಿದ್ಕೀಯನೂ ಇವರೇ.
13 ಆಗ ಬಾರೂಕನು ಆ ಪುಸ್ತಕವನ್ನು ಜನರಿಗೆ ಓದಿ ಹೇಳಿದಾಗ ವಿಾಕಾ ಯನು ತಾನು ಕೇಳಿದ ವಾಕ್ಯಗಳನ್ನೆಲ್ಲಾ ಅವರಿಗೆ ತಿಳಿಸಿದನು.
14 ಆದದರಿಂದ ಪ್ರಧಾನರೆಲ್ಲರೂ ಕೂಷಿಯ ಮಗನಾದ ಶೆಲೆಮ್ಯನ ಮಗನಾದ ನೆಥನ್ಯನ ಮಗನಾದ ಯೆಹೂದಿಯನ್ನು ಬಾರೂಕನ ಬಳಿಗೆ ಕಳುಹಿಸಿ--ನೀನು ಜನರಿಗೆ ಓದಿ ಹೇಳಿದ ಸುರಳಿಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಬಾ ಎಂದು ಹೇಳಿದರು; ಹಾಗೆಯೇ ನೇರೀಯನ ಮಗನಾದ ಬಾರೂಕನು ಸುರಳಿಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅವರ ಬಳಿಗೆ ಬಂದನು.
15 ಆಗ ಅವರು ಅವನಿಗೆ--ಈಗ ಕೂತುಕೊಂಡು ನಮಗೆ ಓದಿ ಹೇಳು ಅಂದರು; ಆಗ ಬಾರೂಕನು ಅವರಿಗೆ ಓದಿ ಹೇಳಿದನು.
16 ಆಗ ಆದದ್ದೇನಂದರೆ--ಅವರು ಆ ವಾಕ್ಯಗಳನ್ನೆಲ್ಲಾ ಕೇಳಿದ ಮೇಲೆ ಒಬ್ಬರಿಗೊಬ್ಬರು ಹೆದರಿಕೊಂಡು--ನಾವು ನಿಶ್ಚಯವಾಗಿ ಈ ವಾಕ್ಯಗಳನ್ನೆಲ್ಲಾ ಅರಸನಿಗೆ ತಿಳಿಸುತ್ತೇ ವೆಂದು ಬಾರೂಕನಿಗೆ ಹೇಳಿದರು.
17 ಅವರು ಬಾರೂಕ ನಿಗೆ--ನೀನು ಅವನ ಬಾಯಿಂದ ಈ ವಾಕ್ಯಗಳನ್ನೆಲ್ಲಾ ಹೇಗೆ ಬರೆದದ್ದನ್ನು ನಮಗೆ ತಿಳಿಸು ಅಂದರು.
18 ಆಗ ಬಾರೂಕನು ಅವರಿಗೆ--ಅವನು ಬಾಯಿಂದ ಈ ವಾಕ್ಯ ಗಳನ್ನೆಲ್ಲಾ ನನಗೆ ಹೇಳಿಕೊಟ್ಟನು; ನಾನು ಅವುಗಳನ್ನು ಮಸಿಯಿಂದ ಪುಸ್ತಕದಲ್ಲಿ ಬರೆದೆನು ಅಂದನು.
19 ಆಗ ಪ್ರಧಾನರು ಬಾರೂಕನಿಗೆ--ನೀನೂ ಯೆರೆವಿಾಯನೂ ಹೋಗಿ ಅಡಗಿಕೊಳ್ಳಿರಿ; ನೀವು ಎಲ್ಲಿದ್ದೀರೆಂಬದು ಯಾರಿಗೂ ತಿಳಿಯಲ್ಪಡದೆ ಇರಲಿ ಅಂದರು.
20 ಆಮೇಲೆ ಅವರು ಅರಸನ ಬಳಿಗೆ ಅಂಗಳಕ್ಕೆ ಹೋದರು; ಆದರೆ ಆ ಸುರಳಿಯನ್ನು ಲೇಖಕನಾದ ಎಲೀಷಾಮನ ಕೊಠಡಿಯಲ್ಲಿ ಇಟ್ಟುಬಿಟ್ಟರು; ಅರಸನಿಗೆ ಆ ವಾಕ್ಯಗಳನ್ನೆಲ್ಲಾ ಹೇಳಿದರು.
21 ಆಗ ಅರಸನು ಆ ಸುರಳಿಯನ್ನು ತಕ್ಕೊಂಡು ಬರುವ ಹಾಗೆ ಯೆಹೂದಿಯನ್ನು ಕಳುಹಿಸಿದನು; ಅವನು ಅದನ್ನು ಲೇಖಕನಾದ ಎಲೀಷಾಮನ ಕೊಠಡಿಯೊಳಗಿಂದ ತೆಗೆದುಕೊಂಡನು; ಯೆಹೂದಿಯು ಅದನ್ನು ಅರಸನ ಮತ್ತು ಅವನ ಬಳಿಯಲ್ಲಿ ನಿಂತ ಎಲ್ಲಾ ಪ್ರಧಾನ ರಿಗೂ ಓದಿ ಹೇಳಿದನು.
22 ಆಗ ಒಂಭತ್ತನೇ ತಿಂಗಳಲ್ಲಿ ಅರಸನು ಚಳಿಗಾಲದ ಮನೆಯಲ್ಲಿ ಕೂತುಕೊಂಡಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಉರಿಯುತ್ತಿತ್ತು.
23 ಆಗ ಆದದ್ದೇನಂದರೆ--ಯೆಹೂದಿಯು ಮೂರು ನಾಲ್ಕು ಪುಟಗಳನ್ನು ಓದಿದ ಮೇಲೆ ಅದನ್ನು ಚೂರಿ ಯಿಂದ ಕೊಯ್ದು ಅಗ್ಗಿಷ್ಟಿಕೆಯಲ್ಲಿದ್ದ ಬೆಂಕಿಯೊಳಗೆ ಸುರಳಿಯನ್ನೆಲ್ಲಾ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟು ಹೋಗುವ ವರೆಗೂ ಹಾಕಿಬಿಟ್ಟನು.
24 ಆದಾಗ್ಯೂ ಈ ವಾಕ್ಯಗಳನ್ನೆಲ್ಲಾ ಕೇಳಿದ ಅರಸನಾದರೂ ಅವನ ಸೇವಕರಲ್ಲಿ ಒಬ್ಬನಾದರೂ ಹೆದರಲಿಲ್ಲ, ತಮ್ಮವಸ್ತ್ರ ಗಳನ್ನು ಹರಕೊಳ್ಳಲಿಲ್ಲ.
25 ಹೀಗಾದರೂ ಎಲ್ನಾಥಾ ನನೂ ದೆಲಾಯನೂ ಗೆಮರ್ಯನೂ ಆ ಸುರಳಿಯು ಸುಡಲ್ಪಡದ ಹಾಗೆ ಅರಸನಿಗೆ ಬಿನ್ನಹ ಮಾಡಿದರು; ಆದರೆ ಅವನು ಅವರಿಗೆ ಕಿವಿಗೊಡಲಿಲ್ಲ.
26 ಅರಸನು ಎರಖ್ಮೆಯೆಲನ ಮಗನಾದ ಯೆರೆಮ್ಮೇಲನಿಗೂ ಅಜ್ರಿ ಯೇಲನ ಮಗನಾದ ಸೆರಾಯನಿಗೂ ಅಬ್ದೆಯೇಲನ ಮಗನಾದ ಶೆಲೆಮ್ಯನಿಗೂ ಲೇಖಕನಾದ ಬಾರೂಕ ನನ್ನೂ ಪ್ರವಾದಿಯಾದ ಯೆರೆವಿಾಯನನ್ನೂ ಹಿಡಿಯ ಬೇಕೆಂದು ಆಜ್ಞಾಪಿಸಿದನು; ಆದರೆ ಕರ್ತನು ಅವರನ್ನು ಅಡಗಿಸಿದನು.
27 ಆಗ ಅರಸನು ಆ ಸುರಳಿಯನ್ನೂ ಬಾರೂಕನು ಯೆರೆವಿಾಯನ ಬಾಯಿಂದ ಬರೆದಿದ್ದ ವಾಕ್ಯಗಳನ್ನೂ ಸುಟ್ಟಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--
28 ನೀನು ಮತ್ತೊಂದು ಸುರಳಿಯನ್ನು ತಕ್ಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರಳಿ ಯಲ್ಲಿದ್ದ ಮುಂಚಿನ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
29 ಯೆಹೂದದ ಅರಸನಾದ ಯೆಹೋಯಾಕೀಮನಿಗೆ ನೀನು ಹೇಳತಕ್ಕದ್ದೇನಂದರೆ--ಕರ್ತನು ಹೀಗೆ ಹೇಳು ತ್ತಾನೆ--ಬಾಬೆಲಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ ಮನುಷ್ಯರನ್ನೂ ಪ್ರಾಣ ಗಳನ್ನೂ ಅದರೊಳಗಿಂದ ಹಾಳು ಮಾಡುವದು ಖಂಡಿತ ಎಂದು ಇದರಲ್ಲಿ ಯಾಕೆ ಬರೆದಿದ್ದೀ ಎಂದು ಹೇಳಿ ನೀನು ಈ ಸುರಳಿಯನ್ನು ಸುಟ್ಟಿದ್ದೀ.
30 ಆದದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೇಳುವದೇನಂದರೆ--ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವವನು ಅವನಿಗೆ ಇರು ವದಿಲ್ಲ; ಅವನ ಹೆಣವು ಹಗಲಿನಲ್ಲಿ ಬಿಸಲಿಗೂ ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲ್ಪಡುವದು.
31 ಅವ ನನ್ನೂ ಅವನ ಸಂತಾನವನ್ನೂ ಸೇವಕರನ್ನೂ ಅವರ ಅಕ್ರಮಕ್ಕಾಗಿ ದಂಡಿಸುವೆನು; ಅವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡ ದಂಥ ಕೇಡನ್ನೆಲ್ಲಾ ಬರಮಾಡುವೆನು.
32 ಆಗ ಯೆರೆವಿಾ ಯನು ಮತ್ತೊಂದು ಸುರಳಿಯನ್ನು ತಕ್ಕೊಂಡು ನೇರೀಯನ ಮಗನಾದ ಲೇಖಕನಾದ ಬಾರೂಕನಿಗೆ ಕೊಟ್ಟನು; ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಪುಸ್ತಕದ ವಾಕ್ಯಗಳನ್ನೆಲ್ಲಾ ಯೆರೆವಿಾಯನ ಬಾಯಿಂದ ಬಂದ ಹಾಗೆ ಬರೆದನು; ಇದಲ್ಲದೆ ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲ್ಪಟ್ಟವು.