ಅಧ್ಯಾಯ 28

ಅದೇ ವರುಷದಲ್ಲಿ ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಪ್ರಾರಂಭ ದಲ್ಲಿ ನಾಲ್ಕನೇ ವರುಷದ ಐದನೇ ತಿಂಗಳಲ್ಲಿ ಗಿಬ್ಯೋನಿ ನವನಾದ ಅಜ್ಜೂರನ ಮಗನಾದ ಹನನ್ಯನೆಂಬ ಪ್ರವಾ ದಿಯು ಕರ್ತನ ಆಲಯದಲ್ಲಿ ಯಾಜಕರ ಮುಂದೆಯೂ ಜನರೆಲ್ಲರ ಮುಂದೆಯೂ ನನಗೆ ಹೇಳಿದ್ದೇನಂದರೆ --
2 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಬಾಬೆಲಿನ ಅರಸನ ನೊಗವನ್ನು ಮುರಿದಿದ್ದೇನೆ.
3 ಎರಡು ವರುಷದೊಳ ಗಾಗಿ ನಾನು ಬಾಬೆಲಿನ ಅರಸನಾದ ನೆಬೂಕ ದ್ನೆಚ್ಚರನು ಈ ಸ್ಥಳದಿಂದ ತಕ್ಕೊಂಡು ಬಾಬೆಲಿಗೆ ಒಯ್ದ ಕರ್ತನ ಆಲಯದ ಪಾತ್ರೆಗಳನ್ನೆಲ್ಲಾ ತಿರುಗಿಸುವೆನು.
4 ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ ಬಾಬೆಲಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರ ಮಾಡುವೆನೆಂದು ಕರ್ತನು ಅನ್ನುತ್ತಾನೆ; ಬಾಬೆಲಿನ ಅರಸನ ನೊಗವನ್ನು ಮುರಿದುಬಿಡುವೆನು.
5 ಆಗ ಪ್ರವಾದಿಯಾದ ಯೆರೆವಿಾಯನು ಯಾಜಕರ ಮುಂದೆಯೂ ಕರ್ತನ ಆಲಯದಲ್ಲಿ ನಿಂತಿರುವ ಜನರೆಲ್ಲರ ಮುಂದೆಯೂ ಪ್ರವಾದಿಯಾದ ಹನನ್ಯ ನಿಗೆ ಹೇಳಿದ್ದೇನಂದರೆ--
6 ಪ್ರವಾದಿಯಾದ ಯೆರೆವಿಾ ಯನು ಹೇಳಿದ್ದೇನಂದರೆ-- ಆಮೆನ್‌: ಕರ್ತನು ಹಾಗೆಯೇ ಮಾಡಲಿ: ನೀನು ಪ್ರವಾದಿಸಿದ ನಿನ್ನ ವಾಕ್ಯಗಳನ್ನು ಕರ್ತನು ನೆರವೇರಿಸಿ ಕರ್ತನ ಆಲಯದ ಪಾತ್ರೆಗಳನ್ನೂ ಸೆರೆಯವರೆಲ್ಲರನ್ನೂ ಬಾಬೆಲಿನಿಂದ ತಿರುಗಿ ಈ ಸ್ಥಳಕ್ಕೆ ಬರಮಾಡಲಿ.
7 ಆದಾಗ್ಯೂ ನಾನು ನಿನಗೂ ಜನರ ಕಿವಿಗಳಿಗೂ ಬೀಳುವಂತೆ ಹೇಳುವ ಈ ವಾಕ್ಯವನ್ನು ಕೇಳು.
8 ಮುಂಚೆ ಇದ್ದ ಹಿಂದಿನ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ರಾಜ್ಯ ಗಳಿಗೂ ವಿರೋಧವಾಗಿ ಯುದ್ಧವನ್ನೂ ಕೇಡನ್ನೂ ಜಾಡ್ಯವನ್ನೂ ಕುರಿತು ಪ್ರವಾದಿಸಿದರು.
9 ಸಮಾಧಾನ ವನ್ನು ಕುರಿತು ಪ್ರವಾದಿಸುವ ಪ್ರವಾದಿಯಾದರೆ ಆ ಪ್ರವಾದಿಯ ವಾಕ್ಯವು ಉಂಟಾಗುವಾಗ ಅವನು ದೇವ ರಿಂದ ನಿಜವಾಗಿ ಕಳುಹಿಸಲ್ಪಟ್ಟ ಪ್ರವಾದಿ ಎಂದು ತಿಳಿಯತಕ್ಕದ್ದು ಅಂದನು.
10 ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರವಿಾಯನ ಕುತ್ತಿಗೆ ಯಿಂದ ನೊಗವನ್ನು ತೆಗೆದು ಅದನ್ನು ಮುರಿದುಬಿಟ್ಟನು.
11 ಹನನ್ಯನು ಜನರೆಲ್ಲರ ಮುಂದೆ ಹೇಳಿದ್ದೇನಂದರೆ --ಕರ್ತನು ಹೀಗೆ ಹೇಳುತ್ತಾನೆ--ಇದೇ ಪ್ರಕಾರ ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರುಷದೊಳಗಾಗಿ ಎಲ್ಲಾ ಜನಾಂಗಗಳ ಕುತ್ತಿ ಗೆಯ ಮೇಲಿನಿಂದ ಮುರಿದು ಹಾಕುವೆನು ಅಂದನು. ಆಗ ಪ್ರವಾದಿಯಾದ ಯೆರೆವಿಾಯನು ತನ್ನ ಮಾರ್ಗ ವಾಗಿ ಹೋದನು.
12 ಆಗ ಪ್ರವಾದಿಯಾದ ಹನನ್ಯನು ಆ ನೊಗವನ್ನು ಪ್ರವಾದಿಯಾದ ಯೆರೆವಿಾಯನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕಿದ ಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--
13 ಹೋಗಿ ಹನನ್ಯನಿಗೆ ಹೀಗೆ ಹೇಳು--ನೀನು ಮರದ ನೊಗಗಳನ್ನು ಮುರಿದಿದ್ದೀ; ಆದರೆ ಅವುಗಳಿಗೆ ಬದಲಾಗಿ ಕಬ್ಬಿಣದ ನೊಗಗಳನ್ನು ಉಂಟುಮಾಡುವಿ ಎಂದು ಕರ್ತನು ಹೇಳುತ್ತಾನೆ.
14 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಈ ಎಲ್ಲಾ ಜನಾಂಗಗಳ ಕುತ್ತಿಗೆಗಳ ಮೇಲೆ ಅವರು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಸೇವೆ ಮಾಡುವ ಹಾಗೆ ಕಬ್ಬಿಣದ ನೊಗವನ್ನು ಇಟ್ಟಿದ್ದೇನೆ; ಅವರು ಅವನಿಗೆ ಸೇವೆ ಮಾಡುವರು; ಭೂಮಿಯ ಮೃಗಗಳನ್ನು ಸಹ ಅವನಿಗೆ ಕೊಟ್ಟಿದ್ದೇನೆ.
15 ಪ್ರವಾದಿಯಾದ ಯೆರೆವಿಾಯನು ಪ್ರವಾದಿಯಾದ ಹನನ್ಯನಿಗೆ ಹೇಳಿದ್ದೇನಂದರೆ--ಹನ ನ್ಯನೇ, ಕೇಳು; ಕರ್ತನು ನಿನ್ನನ್ನು ಕಳುಹಿಸಲಿಲ್ಲ; ನೀನು ಈ ಜನರನ್ನು ಸುಳ್ಳಿನಲ್ಲಿ ನಂಬಿಕೆ ಇಡುವಂತೆ ಮಾಡುತ್ತೀ.
16 ಆದದರಿಂದ ಕರ್ತನು ಹೀಗೆ ಹೇಳು ತ್ತಾನೆಇಗೋ, ನಾನು ನಿನ್ನನ್ನು ಭೂಮಿಯ ಮೇಲಿನಿಂದ ಬಿಸಾಡಿ ಬಿಡುತ್ತೇನೆ; ಈ ವರುಷ ನೀನು ಸಾಯುವಿ; ನೀನು ಕರ್ತನಿಗೆ ವಿರೋಧವಾಗಿ ದ್ರೋಹ ಬಗೆದಿದ್ದೀ ಅಂದನು.
17 ಹಾಗೆಯೇ ಹನನ್ಯನು ಅದೇ ವರುಷದಲ್ಲಿ ಏಳನೇ ತಿಂಗಳಲ್ಲಿ ಸತ್ತನು.