ಯೆಶಾಯ
ಅಧ್ಯಾಯ 12
ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.
2 ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ.
3 ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ.
4 ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ.
5 ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.
6 ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.