ಪ್ರಕಟನೆ

1 2 3 4 5 6 7 8 9 10 11 12 13 14 15 16 17 18 19 20 21 22


ಅಧ್ಯಾಯ 3

ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ : ದೇವರ ಏಳು ಆತ್ಮಗಳೂ ಏಳೂ ನಕ್ಷತ್ರಗಳೂ ಉಳ್ಳಾತನು ಹೇಳುವಂಥವುಗಳೇನಂದರೆ, ನಿನ್ನ ಕ್ರಿಯೆಗಳನ್ನು ಅಂದರೆ ಜೀವಿಸುವವನು ಎಂದು ಹೆಸರು ನಿನಗಿದ್ದರೂ ಸತ್ತವನಾಗಿದ್ದೀ ಎಂದು ನಾನು ಬಲ್ಲೆನು.
2 ಎಚ್ಚರವಾಗಿರು, ಸಾಯುವದಕ್ಕೆ ಸಿದ್ಧವಾಗಿ ರುವ ಉಳಿದವುಗಳನ್ನು ಬಲಪಡಿಸು. ಯಾಕಂದರೆ ದೇವರ ಮುಂದೆ ನಿನ್ನ ಕ್ರಿಯೆಗಳು ಸಂಪೂರ್ಣವಾದ ವುಗಳೆಂದು ನಾನು ಕಾಣಲಿಲ್ಲ.
3 ಆದದರಿಂದ ನೀನು ಹೊಂದಿದ್ದನ್ನೂ ಕೇಳಿದ್ದನ್ನೂ ನೆನಪಿಗೆ ತಂದುಕೊಂಡು ಅದನ್ನು ಬಿಗಿಯಾಗಿ ಹಿಡಿದುಕೋ, ಮಾನಸಾಂತರ ಪಡು. ನೀನು ಎಚ್ಚರವಾಗಿಲ್ಲದಿದ್ದರೆ ಕಳ್ಳನು ಬರುವಂತೆ ನಾನು ನಿನ್ನ ಮೇಲೆ ಬರುವೆನು; ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯದು.
4 ತಮ್ಮ ವಸ್ತ್ರಗಳನ್ನು ಮಲಿನಮಾಡಿ ಕೊಳ್ಳದಿರುವ ಕೆಲವರು ಸಾರ್ದಿಸಿನಲ್ಲಿ ಸಹ ನಿನ್ನಲ್ಲಿ ದ್ದಾರೆ. ಅವರು ಬಿಳೀ ವಸ್ತ್ರಗಳನ್ನು ಧರಿಸಿಕೊಂಡು ನನ್ನೊಂದಿಗೆ ನಡೆಯುವರು. ಯಾಕಂದರೆ ಅವರು ಯೋಗ್ಯರಾಗಿದ್ದಾರೆ.
5 ಜಯಹೊಂದುವ ಇವನೇ ಬಿಳೀ ವಸ್ತ್ರದಿಂದ ಹೊದಿಸಲ್ಪಡುವನು; ಜೀವದ ಪುಸ್ತಕದಿಂದ ನಾನು ಅವನ ಹೆಸರನ್ನು ಅಳಿಸಿ ಬಿಡುವದೇ ಇಲ್ಲ, ಆದರೆ ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಅವನ ಹೆಸರನ್ನು ಒಪ್ಪಿಕೊಳ್ಳುವೆನು.
6 ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.
7 ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ: ಪರಿಶುದ್ಧನೂ ಸತ್ಯವಂತನೂ ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚಕೂಡದಂತೆ ತೆರೆಯು ವಾತನೂ ಯಾರು ತೆರೆಯದಂತೆ ಮುಚ್ಚುವಾತನೂ ಆಗಿರುವವನು ಹೇಳುವಂಥವುಗಳೇನಂದರೆ,
8 ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ಇಗೋ, ನಾನು ನಿನ್ನ ಮುಂದೆ ಒಂದು ಬಾಗಲನ್ನು ತೆರೆದಿದ್ದೇನೆ, ಅದನ್ನು ಯಾವ ಮನುಷ್ಯನೂ ಮುಚ್ಚಲಾರನು; ಯಾಕಂದರೆ ನಿನ್ನ ಶಕ್ತಿ ಕೊಂಚವಾಗಿದ್ದರೂ ನನ್ನ ವಾಕ್ಯವನ್ನು ಕಾಪಾಡಿ ನನ್ನ ಹೆಸರನ್ನು ಅಲ್ಲಗಳೆಯಲಿಲ್ಲ.
9 ಇಗೋ, ಯೆಹೂದ್ಯ ರಲ್ಲದವರಾಗಿದ್ದರೂ ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದವರನ್ನು ಬರಮಾಡಿ, ಇಗೋ, ಅವರನ್ನು ನಿನ್ನ ಪಾದಗಳ ಮುಂದೆ ಆರಾಧಿಸುವಂತೆ ಮಾಡುವೆನು, ಇದರಿಂದ ನಾನು ನಿನ್ನನ್ನು ಪ್ರೀತಿಸಿದ್ದೇನೆಂದು ಅವರು ತಿಳುಕೊಳ್ಳುವಂತೆ ಮಾಡು
10 ನೀನು ನನ್ನ ಸಹನ ವಾಕ್ಯವನ್ನು ಕಾಪಾಡಿದ್ದರಿಂದ ಭೂಮಿಯ ಮೇಲೆ ವಾಸ ಮಾಡುವವ ರನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರು ವದಕ್ಕಿರುವ ಶೋಧನೆಯ ಸಮಯದಿಂದ ನಾನು ಸಹ ನಿನ್ನನ್ನು ಕಾಪಾಡುವೆನು.
11 ಇಗೋ, ನಾನು ಬೇಗನೆ ಬರುತ್ತೇನೆ; ನಿನ್ನ ಕಿರೀಟವನ್ನು ಯಾರೂ ಅಪಹರಿಸ ದಂತೆ ನಿನಗಿರುವದನ್ನು ಬಿಗಿಯಾಗಿ ಹಿಡಿದುಕೊಂಡಿರು;
12 ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಮಾಡುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವದೇ ಇಲ್ಲ. ಇದಲ್ಲದೆ ನನ್ನ ದೇವರ ಹೆಸರನ್ನೂ ಪರಲೋಕದಲ್ಲಿರುವ ನನ್ನ ದೇವರ ಬಳಿಯಿಂದ ಇಳಿದು ಬರುವ ಹೊಸ ಯೆರೂಸಲೇಮ್‌ ಎಂಬ
13 ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.
14 ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ಆಮೆನ್‌ ಎಂಬಾತನು ಮತ್ತು ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಯ ಆದಿಯೂ ಆಗಿರುವಾತನು ಹೇಳುವವುಗಳು ಯಾವವೆಂದರೆ,
15 ನೀನು ತಣ್ಣಗೂ ಬೆಚ್ಚಗೂ ಅಲ್ಲದಿರುವ ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇರಬೇಕೆಂಬದು ನನ್ನ ಇಷ್ಟವಾಗಿತ್ತು.
16 ಆದರೆ ನೀನು ತಣ್ಣಗಾಗಲಿ ಇಲ್ಲವೆ ಬೆಚ್ಚಗಾಗಲಿ ಇಲ್ಲದೆ ಉಗುರು ಬೆಚ್ಚಗಿರುವದರಿಂದ ನಿನ್ನನ್ನು ನಾನು ನನ್ನ ಬಾಯೊಳಗಿಂದ ಕಾರುವೆನು.
17 ನೀನು--ನಾನು ಐಶ್ವರ್ಯವಂತನು, ಧನವೃದ್ಧಿಯುಳ್ಳವನು, ಯಾವದರ ಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ನಿರ್ಗತಿಕನು, ದರಿದ್ರನು, ಬಡವನು, ಕುರುಡನು, ಬೆತ್ತಲೆಯಾದವನು ಆಗಿರುವ ದನ್ನು ತಿಳಿಯದೆ ಇದ್ದೀ.
18 ನೀನು ಐಶ್ವರ್ಯವಂತ ನಾಗುವ ಹಾಗೆ ಬೆಂಕಿಯಲ್ಲಿ ಶೋಧಿಸಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಹೊದ್ದು ಕೊಳ್ಳುವದಕ್ಕಾಗಿ ಬಿಳೀ ವಸ್ತ್ರವನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಿನಗೆ ಬುದ್ಧಿ ಹೇಳುತ್ತೇ
19 ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
20 ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು.
21 ನಾನು ಜಯಹೊಂದಿ ನನ್ನ ತಂದೆಯೊಡನೆ ಆತನ ಸಿಂಹಾಸನದಲ್ಲಿ ಕೂತುಕೊಂಡ ಹಾಗೆಯೇ ಜಯಹೊಂದುವವನನ್ನು ನನ್ನೊಡನೆ ನನ್ನ ಸಿಂಹಾಸನದಲ್ಲಿ ನನ್ನ ಕೂಡ ಕೂತುಕೊಳ್ಳುವಂತೆ ಅನು ಗ್ರಹಿಸುವೆನು.
22 ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.