ನಹೂಮ
ಅಧ್ಯಾಯ 3
ರಕ್ತವುಳ್ಳ ಪಟ್ಟಣಕ್ಕೆ ಅಯ್ಯೋ! ಅದೆಲ್ಲಾ ಸುಳ್ಳಿನಿಂದಲೂ ಕಳ್ಳತನದಿಂದಲೂ ತುಂಬಿ ಯದೆ; ಕೊಳ್ಳೆಯನ್ನು ಬಿಡುವದಿಲ್ಲ.
2 ಚಾವಟಿಗೆ ಚಬುಕಿನ ಶಬ್ದವೂ ಚಕ್ರಗಳ ಧಡಧಡನೆಯ ಶಬ್ದವೂ ಕುದುರೆಗಳ ಕುಣಿದಾಟವೂ ರಥಗಳ ಹಾರಾಟವೂ ಉಂಟು.
3 ಸವಾರನು ಹತ್ತುತ್ತಾನೆ, ಕತ್ತಿಗಳು ಮಿಂಚು ತ್ತವೆ. ಈಟಿಗಳು ಥಳಥಳಿಸುತ್ತವೆ, ಹತವಾದವರು ಬಹಳ; ಹೆಣಗಳು ಬಹಳ; ಶವಗಳಿಗೆ ಅಂತ್ಯವೇ ಇಲ್ಲ; ಅವರು ಶವಗಳ ಮೇಲೆ ಎಡವುತ್ತಾರೆ.
4 ಸೌಂದರ್ಯವುಳ್ಳ ಮಾಟಗಾರ್ತಿಯಾದ ಸೂಳೆಯ ಸೂಳೆತನಗಳು ಬಹಳ; ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ ತನ್ನ ಮಾಟಗಳಿಂದ ಗೋತ್ರಗಳನ್ನೂ ಮಾರಿದಳಲ್ಲಾ?
5 ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
6 ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ ನಿನ್ನನ್ನು ನೀಚಳನ್ನಾಗಿ ಮಾಡಿ ನಿನ್ನನ್ನು ನೋಟಕ್ಕೆ ಇಡುತ್ತೇನೆ.
7 ಆಗ ಆಗುವದೇನಂದರೆ, ನಿನ್ನನ್ನು ನೋಡುವವ ರೆಲ್ಲರೂ ನಿನ್ನಿಂದ ಓಡಿಹೋಗಿ ನಿನೆವೆ ಹಾಳಾಯಿತು; ಅದಕ್ಕೆ ಯಾರು ಚಿಂತೆಪಡುವರು, ನಿನಗಾಗಿ ಆದರಿ ಸುವವರನ್ನು ನಾನು ಎಲ್ಲಿಂದ ಹುಡುಕಲಿ ಎಂದು ಹೇಳುವರು.
8 ನದಿಗಳ ಬಳಿ ನೆಲೆಯಾಗಿದ್ದ ಅಮೋನಿಗಿಂತ ನೀನು ಒಳ್ಳೆಯವಳೋ? ಅದರ ಸುತ್ತಲೂ ನೀರಿತ್ತು; ಅದರ ಬಲವು ಸಮುದ್ರವೇ; ಸಮುದ್ರವು ಅದಕ್ಕೆ ಗೋಡೆ ಯಾಗಿತ್ತು.
9 ಕೂಷೂ ಐಗುಪ್ತವೂ ಅದರ ಬಲ ವಾಗಿದ್ದವು; ಮತ್ತು ಲೆಕ್ಕವಿಲ್ಲದ್ದಾಗಿತ್ತು; ಪೂಟರೂ ಲೂಬ್ಯರೂ ನಿನ್ನ ಸಹಾಯಕರಾಗಿದ್ದರು.
10 ಆದರೆ ಅದು ಸೆರೆಯಾಗಿ ದೇಶಾಂತರಕ್ಕೆ ಹೋಯಿತು; ಅದರ ಕೂಸುಗಳು ಸಹ ಎಲ್ಲಾ ಬೀದಿಗಳ ತುದಿಗಳಲ್ಲಿ ಜಜ್ಜ ಲ್ಪಟ್ಟವು; ಅದರ ಘನವುಳ್ಳವರಿಗೋಸ್ಕರ ಚೀಟು ಹಾಕಿದರು; ಅದರ ಮಹನೀಯರೆಲ್ಲರೂ ಸಂಕೋಲೆ ಗಳಿಂದ ಕಟ್ಟಲ್ಪಟ್ಟರು.
11 ನೀನು ಸಹ ಅಮಲೇರಿದ್ದೀ, ಅಡಗಿಕೊಳ್ಳುವಿ; ನೀನು ಸಹ ಶತ್ರುವಿನ ನಿಮಿತ್ತ ತ್ರಾಣ ವನ್ನು ಹುಡುಕುವಿ.
12 ನಿನ್ನ ಕೋಟೆಗಳೆಲ್ಲಾ ಮೊದಲನೇ ಹಣ್ಣುಗಳುಳ್ಳ ಅಂಜೂರದ ಗಿಡಗಳ ಹಾಗಿರುವವು; ಅಲ್ಲಾಡಿಸಲ್ಪಟ್ಟರೆ ತಿನ್ನುವವನ ಬಾಯಲ್ಲಿಯೇ ಬೀಳುವವು.
13 ಇಗೋ, ನಿನ್ನ ಮಧ್ಯದಲ್ಲಿರುವ ನಿನ್ನ ಜನರು ಹೆಂಗಸರ ಹಾಗಿದ್ದಾರೆ; ನಿನ್ನ ದೇಶದ ಬಾಗಲುಗಳು ನಿನ್ನ ಶತ್ರುಗಳಿಗೆ ಅಗಲವಾಗಿ ತೆರೆಯಲ್ಪಡುವವು; ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಡುವದು.
14 ಮುತ್ತಿಗೆಗೋಸ್ಕರ ನೀರನ್ನು ಸೇದು ನಿನ್ನ ಬಲವಾದ ಕೋಟೆಗಳನ್ನು ಭದ್ರ ಮಾಡು; ಕೆಸರಿನಲ್ಲಿ ಸೇರು ಮಣ್ಣನ್ನು ತುಳಿ, ಇಟ್ಟಿಗೆ ಗೂಡನ್ನು ಬಲಪಡಿಸು.
15 ಅಲ್ಲೇ ಬೆಂಕಿ ನಿನ್ನನ್ನು ನುಂಗುವದು; ಕತ್ತಿಯು ನಿನ್ನನ್ನು ಕಡಿದುಬಿಡುವದು; ನಾಶಕ ಹುಳದಂತೆ ಅದು ನಿನ್ನನ್ನು ತಿಂದುಬಿಡುವದು; ನಾಶಕ ಹುಳದಂತೆ ಬಹು ಮಂದಿಯಾಗು; ಮಿಡತೆಗಳಂತೆ ಬಹು ಮಂದಿಯಾಗು.
16 ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿ ಸಿದ್ದೀ; ನಾಶಕ ಹುಳವು ನಾಶಮಾಡಿ ಹಾರಿಹೋಗು ತ್ತದೆ.
17 ನಿನ್ನ ಕಿರೀಟಧಾರಿಗಳು ಮಿಡತೆಗಳ ಹಾಗೆಯೂ ನಿನ್ನ ಅಧಿಪತಿಗಳು ತಂಪಾದ ದಿನದಲ್ಲಿ ಬೇಲಿಗಳೊಳಗೆ ಇಳುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ; ಸೂರ್ಯನು ಹುಟ್ಟುವಾಗ ಹಾರಿಹೋಗು ತ್ತವೆ; ಆಗ ಅವು ಎಲ್ಲಿರುವವೆಂದು ಅವುಗಳ ಸ್ಥಳವು ತಿಳಿಯುವದಿಲ್ಲ;
18 ಅಶ್ಶೂರ್ಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ, ನಿನ್ನ ಶ್ರೇಷ್ಠರು ಧೂಳಿನಲ್ಲಿ ಬಿದ್ದಿದ್ದಾರೆ; ನಿನ್ನ ಜನರು ಬೆಟ್ಟಗಳಲ್ಲಿ ಚದರಿ ಹೋಗಿ ದ್ದಾರೆ; ಕೂಡಿಸುವವರು ಯಾರೂ ಇಲ್ಲ.
19 ನಿನ್ನ ಗಾಯವು ಗುಣಹೊಂದದು; ನಿನ್ನ ಗಾಯ ಕಠಿಣ ವಾದದ್ದು; ನಿನ್ನ ಸುದ್ದಿಯನ್ನು ಕೇಳುವವರೆಲ್ಲರು ನಿನಗೆ ಚಪ್ಪಾಳೆ ಹೊಡೆಯುವರು; ನಿನ್ನ ಕೆಟ್ಟತನವು ನಿತ್ಯವಾಗಿ ಯಾರ ಮೇಲೆ ಹಾದುಹೋಗದೆ ಇತ್ತು?