ಯೋಬನು

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42


ಅಧ್ಯಾಯ 25

ಆ ಮೇಲೆ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನಂದರೆ --
2 ದೊರೆ ತನವೂ ಹೆದರಿಕೆಯೂ ಆತನೊಂದಿಗೆ ಇವೆ; ತನ್ನ ಉನ್ನತ ಸ್ಥಳಗಳಲ್ಲಿ ಆತನು ಸಮಾಧಾನ ಮಾಡುತ್ತಾನೆ.
3 ಆತನ ಸೈನ್ಯಗಳಿಗೆ ಲೆಕ್ಕ ಉಂಟೋ? ಆತನ ಬೆಳಕು ಯಾರ ಮೇಲೆ ಮೂಡುವದಿಲ್ಲ?
4 ಮನುಷ್ಯನು ದೇವರ ಬಳಿಯಲ್ಲಿ ನೀತಿವಂತನಾಗುವದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ನಿರ್ಮಲನಾಗಿರುವದು ಹೇಗೆ?
5 ಇಗೋ, ಚಂದ್ರನಾದರೂ ಹೊಳೆಯು ವದಿಲ್ಲ. ನಕ್ಷತ್ರಗಳಾದರೂ ಆತನ ದೃಷ್ಟಿಗೆ ನಿರ್ಮಲವಾ ಗಿರುವದಿಲ್ಲ.
6 ಮನುಷ್ಯನೆಂಬ ಹುಳವೂ ಮನುಷ್ಯನ ಮಗನೆಂಬ ಕ್ರಿಮಿಯೂ ಎಷ್ಟು ಮಾತ್ರದವನು?