ಎಸ್ತೇರಳು
ಅಧ್ಯಾಯ 10
ಅರಸನಾದ ಅಹಷ್ವೇರೋಷನು ದೇಶದ ಮೇಲೆಯೂ ಸಮುದ್ರದ ದ್ವೀಪಗಳ ಮೇಲೆಯೂ ತೆರಿಗೆಯನ್ನು ನೇಮಿಸಿದನು.
2 ಅವನ ಅಧಿಕಾರದ ಕ್ರಿಯೆಗಳೂ ಅವನ ಪರಾಕ್ರಮವೂ ಅರ ಸನು ಮೊರ್ದೆಕೈಯನ್ನು ಹೆಚ್ಚಿಸಿದ ಮಹತ್ತಿನ ಪ್ರಸಿ ದ್ದಿಯೂ ಇವು ಮೇದ್ಯಪಾರಸಿಯ ಅರಸರುಗಳ ರಾಜ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟವಲ್ಲವೋ?
3 ಯಾಕಂದರೆ ಯೆಹೂದ್ಯನಾದ ಮೊರ್ದೆಕೈ ಅರಸನಾದ ಅಹಷ್ವೇರೋಷನಿಗೆ ಎರಡನೆಯವನೂ ಯೆಹೂದ್ಯ ರಲ್ಲಿ ದೊಡ್ಡವನೂ ತನ್ನ ಸಹೋದರರ ಸಮೂಹದಲ್ಲಿ ಸಮರ್ಪಕನೂ ತನ್ನ ಜನರ ಮೇಲನ್ನು ಹುಡುಕುವ ವನೂ ತನ್ನ ಸಮಸ್ತ ಸಂತಾನದವರಿಗೆ ಸಮಾಧಾನವನ್ನು ಮಾತನಾಡುವವನೂ ಆಗಿದ್ದನು.