1 ಪೂರ್ವಕಾಲವೃತ್ತಾ

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29


ಅಧ್ಯಾಯ 8

ಬೆನ್ಯಾವಿಾನನು ತನ್ನ ಚೊಚ್ಚಲ ಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲ ನನ್ನೂ, ಮೂರನೆಯವನಾದ ಅಹ್ರಹನನ್ನೂ
2 ನಾಲ್ಕನೆ ಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.
3 ಬೆಳನ ಕುಮಾರರು--ಅದ್ವಾರನು ಗೇರನು ಅಬೀಹೂದನು ಅಬೀಷೂವನು
4 ನಾಮಾ ನನು ಅಹೋಹನು ಗೇರನು ಶೆಪೂಫಾನನು ಹೂರಾ ಮನು.
5 ಏಹೂದನ ಕುಮಾರರು--ನಾಮಾನನು, ಅಹೀಯನು, ಗೇರನು.
6 ಇವರೇ ಗೆಬದ ನಿವಾಸಿಗಳ ಪಿತೃಗಳಲ್ಲಿ ಯಜ ಮಾನರಾಗಿದ್ದರು. ಆದರೆ ಅವರನ್ನು ಮಾನಾಹತಿಗೆ ತಕ್ಕೊಂಡು ಹೋದರು.
7 ಅವರನ್ನು ತಕ್ಕೊಂಡು ಹೋದ ತರುವಾಯ ಉಚ್ಚನನ್ನೂ ಅಹೀಹುದನನ್ನೂ ಪಡೆದನು.
8 ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹೂಷೀಮಳೂ ಬಾರಳೂ ಅವನಿಗೆ ಪತ್ನಿಯರಾಗಿದ್ದರು.
9 ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ,
10 ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ, ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಕುಮಾರರಾದ ಇವರು ಪಿತೃಗಳಲ್ಲಿ ಯಜಮಾನರಾಗಿದ್ದರು.
11 ಹುಷೀಮಳಿಂದ ಅವನು ಅಬೀಟೂಬನನ್ನೂ, ಎಲ್ಪಾಲನನ್ನೂ ಪಡೆದನು.
12 ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.
13 ಇದಲ್ಲದೆ ಅವನು ಗತ್‌ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಪಿತೃಗಳಲ್ಲಿ ಯಜಮಾನರಾದ ಬೆರೀಯನು, ಶಮನು.
14 ಬೆರೀಯನ ಕುಮಾರರು -- ಅಹ್ಯೋನು, ಶಾಷಕನು, ಯೆರೇಮೋತನು,
15 ಜೆಬದ್ಯನು, ಅರಾ ದನು, ಎದೆರನು,
16 ವಿಾಕಾಯೇಲನು, ಇಷ್ಪನು, ಯೋಹನು,
17 ಜೆಬದ್ಯನು, ಮೆಷುಲ್ಲಾಮ್‌, ಹಿಜ್ಕೀ, ಹೆಬೆರ್‌,
18 ಇಷ್ಮೆರೈ, ಇಜ್ಲೀಯ, ಯೋಬಾಬ್‌ಇವರು ಎಲ್ಪಾಲನ ಕುಮಾರರು--
19 ಯಾಕೀಮನು, ಜಿಕ್ರೀಯು, ಜಬ್ದಿಯು,
20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್‌,
21 ಅದಾಯ, ಬೆರಾಯ, ಶಿಮ್ರಾತ್‌ ಇವರು ಶಿವ್ಮೆಾಯ ಕುಮಾರರು.
22 ಇಷ್ಪಾನ್‌, ಏಬೆರ್‌, ಎಲೀಯೇಲ್‌,
23 ಅಬ್ದೋನನು, ಜಿಕ್ರೀಯು, ಹಾನಾ ನನು,
24 ಹನನ್ಯನು, ಏಲಾಮನು, ಅನೆತೋತಿಯನು,
25 ಇಫ್ದೆಯನು, ಪೆನೂವೇಲನು ಇವರು ಶಾಷಕನ ಕುಮಾರರು.
26 ಶಂಷೆರೈ, ಶೆಹರ್ಯ, ಅತಲ್ಯ,
27 ಯಾರೆಷ್ಯನು, ಏಲೀಯನು, ಜಿಕ್ರಿಯು--ಇವರು ಯೆರೋಹಾಮನ ಕುಮಾರರು.
28 ಇವರೇ ಪಿತೃಗಳಲ್ಲಿ ಯಜಮಾನರಾಗಿದ್ದು ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
29 ಗಿಬ್ಯೋನಿಯ ತಂದೆ ಗಿಬ್ಯೋನಿನಲ್ಲಿ ವಾಸವಾಗಿ ದ್ದನು; ಅವನ ಹೆಂಡತಿಯ ಹೆಸರು ಮಾಕಳು.
30 ಅವನ ಚೊಚ್ಚಲ ಮಗನು ಅಬ್ದೋನನು; ಚೂರನು, ಕೀಷನು, ಬಾಳನು, ನಾದಾಬನು,
31 ಗೆದೋರನು, ಅಹ್ಯೋನು, ಜೆಕೆರನು.
32 ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ಸಹೋದರರಿಗೆದುರಾಗಿ ಅವರ ಸಂಗಡ ವಾಸ ವಾಗಿದ್ದರು.
33 ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾ ತಾನನನ್ನೂ, ಮಲ್ಕೀಷೂವನನ್ನೂ ಅಬೀನಾದಾಬ ನನ್ನೂ, ಎಷ್ಬಾಳನನ್ನೂ ಪಡೆದನು.
34 ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ವಿಾಕನನ್ನು ಪಡೆದನು.
35 ವಿಾಕನ ಕುಮಾರರು--ಪಿತೋನನು, ಮೆಲೆಕನು, ತರೇಯನು, ಆಹಾಜನು.
36 ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾ ಹನು ಆಲೆಮೆತೆನನ್ನೂ, ಅಜ್ಮಾವೆತನನ್ನೂ, ಜಿವ್ರೆಾ ಯನ್ನೂ ಪಡೆದನು. ಜಿವ್ರೆಾಯು ಮೋಚನನ್ನು ಪಡೆದನು.
37 ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು.
38 ಆಚೇಲನಿಗೆ ಆರು ಮಂದಿ ಕುಮಾರರಿದ್ದರು. ಅವರ ಹೆಸರುಗಳು--ಅಜ್ರೀ ಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು.
39 ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.
40 ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.