ಅರಣ್ಯಕಾಂಡ

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36


ಅಧ್ಯಾಯ 26

ಆದರೆ ವ್ಯಾಧಿಯ ತರುವಾಯ ಕರ್ತನು ಮೋಶೆಯ ಸಂಗಡಲೂ ಆರೋನನ ಮಗನೂ ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡಲೂ ಮಾತನಾಡಿ--
2 ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಇಸ್ರಾಯೇಲ್ಯರಲ್ಲಿ ಯುದ್ಧಕ್ಕೆ ಹೋಗುವದಕ್ಕೆ ಶಕ್ತರಾದವರೆಲ್ಲರ ಲೆಕ್ಕವನ್ನು ಅವರ ತಂದೆಯ ಮನೆಗಳ ಪ್ರಕಾರ ತಕ್ಕೊಳ್ಳಿರಿ ಅಂದನು.
3 ಆಗ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಮೋವಾಬಿನ ಬೈಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ
4 ಕರ್ತನು ಮೋಶೆಗೂ ಐಗುಪ್ತದೇಶದಿಂದ ಹೊರ ಟಿದ್ದ ಇಸ್ರಾಯೇಲ್‌ ಮಕ್ಕಳಿಗೂ ಆಜ್ಞಾಪಿಸಿದ ಪ್ರಕಾರ ಇಪ್ಪತ್ತು ವರುಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.
5 ಇಸ್ರಾಯೇಲ್‌ ಚೊಚ್ಚಲ ಮಗನಾದ ರೂಬೇನನೂ, ರೂಬೇನನ ಮಕ್ಕಳೂ; ಹನೋಕನು; ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ;
6 ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ವಿಾ ಯಿಂದ, ಕರ್ವಿಾಯರ ಕುಟುಂಬ.
7 ಇವೇ ರೂಬೇನ್ಯರ ಕುಟುಂಬಗಳು; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಮೂರುಸಾವಿರದ ಏಳುನೂರ ಮೂವತ್ತು ಮಂದಿ.
8 ಪಲ್ಲೂವಿನ ಕುಮಾರರು; ಎಲೀಯಾಬ್‌.
9 ಎಲೀಯಾ ಬನ ಕುಮಾರರು: ನೆಮೂವೇಲ್‌, ದಾತಾನ್‌, ಅಬೀ ರಾಮ್‌; ಈ ದಾತಾನನೂ ಅಬೀರಾಮನೂ ಸಭೆಯಲ್ಲಿ ಪ್ರಸಿದ್ಧರಾಗಿದ್ದು, ಕೋರಹನ ಗುಂಪಿನಲ್ಲಿದ್ದು ಕರ್ತ ನಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು.
10 ಭೂಮಿಯು ತನ್ನ ಬಾಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು; ಹಾಗೆಯೇ ಗುಂಪಿನವರು ಸತ್ತರು; ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು; ಅವರು ದೃಷ್ಟಾಂತವಾದರು.
11 ಆದಾಗ್ಯೂ ಕೋರಹನ ಮಕ್ಕಳು ಸಾಯಲಿಲ್ಲ.
12 ಕುಟುಂಬಗಳ ಪ್ರಕಾರ ಸಿಮೆಯೋನನ ಕುಮಾ ರರು: ನೆಮೂವೇಲನಿಂದ ನೆಮೂವೇಲ್ಯರ ಕುಟುಂಬ; ಯಾವಿಾನನಿಂದ ಯಾವಿಾನ್ಯರ ಕುಟುಂಬ; ಯಾಕೀನ ನಿಂದ ಯಾಕೀನ್ಯರ ಕುಟುಂಬ;
13 ಜೆರಹನಿಂದ ಜೆರಹಿ ಯರ ಕುಟುಂಬ; ಸೌಲನಿಂದ ಸೌಲ್ಯರ ಕುಟುಂಬ.
14 ಸಿಮೆಯೋನನ ಕುಟುಂಬಗಳು ಇವೇ; ಇಪ್ಪತ್ತೆರಡು ಸಾವಿರದ ಇನ್ನೂರು ಮಂದಿ.
15 ಕುಟುಂಬಗಳ ಪ್ರಕಾರ ಗಾದನ ಮಕ್ಕಳು: ಚೆಫೋನನಿಂದ ಚೆಫೋನ್ಯರ ಕುಟುಂಬ; ಹಗ್ಗೀಯಿಂದ ಹಗ್ಗೀಯರ ಕುಟುಂಬ; ಶೂನೀಯಿಂದ ಶೂನೀಯರ ಕುಟುಂಬ.
16 ಒಜ್ನೀಯಿಂದ ಒಜ್ನೀಯರ ಕುಟುಂಬ; ಏರೀಯಿಂದ ಏರೀಯರ ಕುಟುಂಬ;
17 ಅರೋದನಿಂದ ಅರೋದ್ಯರ ಕುಟುಂಬ. ಅರೇಲೀಯಿಂದ ಅರೇಲೀ ಯರ ಕುಟುಂಬ.
18 ಗಾದನ ಮಕ್ಕಳ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಸಾವಿರದ ಐನೂರು ಮಂದಿ.
19 ಯೆಹೂದನ ಕುಮಾರರು: ಏರನೂ ಓನಾನನೂ; ಆದರೆ ಏರನೂ ಓನಾನನೂ ಕಾನಾನ್‌ ದೇಶದಲ್ಲಿ ಸತ್ತರು.
20 ಕುಟುಂಬಗಳ ಪ್ರಕಾರ ಯೆಹೂದನ ಕುಮಾರರು; ಶೇಲಹನಿಂದ ಶೇಲಹ್ಯರ ಕುಟುಂಬ;
21 ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹೀಯರ ಕುಟುಂಬ. ಪೆರೆಚನ ಕುಮಾರರು; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಹಾಮೂ ಲನಿಂದ ಹಾಮೂಲ್ಯರ ಕುಟುಂಬ.
22 ಯೆಹೂದನ ಕುಟುಂಬಗಳಲ್ಲಿ ಎಣಿಸಲ್ಪಟ್ಟವರು ಎಪ್ಪತ್ತಾರು ಸಾವಿರದ ಐನೂರು ಮಂದಿ.
23 ಕುಟುಂಬಗಳ ಪ್ರಕಾರ ಇಸ್ಸಾಕಾರನ ಕುಮಾರರು: ತೋಲನಿಂದ ತೋಲಾಯರ ಕುಟುಂಬ; ಪುವ್ವನಿಂದ ಪೂನ್ಯರ ಕುಟುಂಬ;
24 ಯಾಶೂಬನಿಂದ ಯಾಶೂ ಬ್ಯರ ಕುಟುಂಬ; ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ.
25 ಇಸ್ಸಾಕಾರನ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುನಾಲ್ಕು ಸಾವಿರದ ಮುನ್ನೂರು ಮಂದಿ.
26 ಜೆಬುಲೂನನ ಕುಮಾ ರರು--ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನಿಂದ ಏಲೋನ್ಯರ ಕುಟುಂಬ; ಯಹಲೇಲನಿಂದ ಯಹಲೇಲ್ಯರ ಕುಟುಂಬ.
27 ಜೆಬುಲೂನಿಯರ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುಸಾವಿರದ ಐನೂರು ಮಂದಿ.
28 ಕುಟುಂಬಗಳ ಪ್ರಕಾರ ಯೋಸೇಫನ ಕುಮಾ ರರು: ಮನಸ್ಸೆಯೂ ಎಫ್ರಾಯಾಮನೂ. ಮನಸ್ಸೆಯ ಕುಮಾರರು: ಮಾಕೀರನಿಂದ ಮಾಕೀರ್ಯರ ಕುಟುಂಬ.
29 ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ;
30 ಗಿಲ್ಯಾದನ ಕುಮಾರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ;
31 ಅಸ್ರೀಯೇಲ ನಿಂದ ಅಸ್ರೀಯೇಲ್ಯರ ಕುಟುಂಬ; ಶೆಕೆಮನಿಂದ ಶೆಕೆಮ್ಯರ ಕುಟುಂಬ;
32 ಶೆವಿಾದಾಯನಿಂದ ಶೆವಿಾದಾ ಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ.
33 ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಇದ್ದರು; ಕುಮಾರ್ತೆಯರ ಹೆಸರುಗಳು. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.
34 ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ.
35 ಕುಟುಂಬಗಳ ಪ್ರಕಾರ ಎಫ್ರಾಯಾಮನ ಕುಮಾ ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನ್ಯರ ಕುಟುಂಬ;
36 ಶೂತೆಲಹನ ಕುಮಾರರು ಏರಾನನಿಂದ ಏರಾನ್ಯರ ಕುಟುಂಬ.
37 ಎಫ್ರಾಯಾಮನ ಕುಮಾರರ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಐನೂರು ಮಂದಿ. ಕುಟುಂಬ ಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ.
38 ಕುಟುಂಬಗಳ ಪ್ರಕಾರ ಬೆನ್ಯಾವಿಾನನ ಕುಮಾ ರರು: ಬೆಲಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲ ನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ;
39 ಶೂಫಾಮನಿಂದ ಶೂಫಾ ಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ;
40 ಬೆಲಗನ ಕುಮಾರರು; ಅರ್ದನೂ ನಾಮಾನನೂ.
41 ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ಬೆನ್ಯಾವಿಾನನ ಕುಮಾರರು ಇವರೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದು ಸಾವಿರದ ಆರು ನೂರು ಮಂದಿ.
42 ಕುಟುಂಬಗಳ ಪ್ರಕಾರ ದಾನನ ಕುಮಾರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ದಾನನ ಕುಟುಂಬಗಳು ಇವೇ.
43 ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಎಣಿಸಲ್ಪ ಟ್ಟವರು ಅರವತ್ತುನಾಲ್ಕು ಸಾವಿರದ ನಾನೂರು ಮಂದಿ.
44 ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನಿಂದ ಇಮ್ನಾಹ್ಯರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ.
45 ಬೆರೀಯನ ಕುಮಾರರು; ಹೇಬೆರನಿಂದ ಹೇಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ.
46 ಆಶೇರನ ಮಗಳ ಹೆಸರು ಸಾರಳು.
47 ಲೆಕ್ಕಾನುಸಾರವಾದ ಆಶೇರನ ಕುಮಾರರ ಕುಟುಂಬಗಳು ಇವೇ; ಅವರು ಐವತ್ತು ಮೂರುಸಾವಿರದ ನಾನೂರು ಮಂದಿ.
48 ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ;
49 ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ.
50 ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದುಸಾವಿರದ ನಾನೂರು ಮಂದಿ.
51 ಇಸ್ರಾಯೇಲ್‌ ಮಕ್ಕಳಲ್ಲಿ ಎಣಿಸಲ್ಪಟ್ಟವರು ಇವರು; ಆರುಲಕ್ಷ ಒಂದುಸಾವಿರದ ಏಳುನೂರ ಮೂವತ್ತು ಮಂದಿ.
52 ಕರ್ತನು ಮೋಶೆಯ ಸಂಗಡ ಮಾತನಾಡಿ
53 ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು.
54 ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು.
55 ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು.
56 ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು.
57 ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.
58 ಲೇವಿಯರ ಕುಟುಂಬಗಳು ಇವೇ: ಲಿಬ್ನೀಯರ ಕುಟುಂಬ; ಹೆಬ್ರೋನ್ಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹಿಯರ ಕುಟುಂಬ;
59 ಆದರೆ ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಐಗುಪ್ತದಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆ ಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು.
60 ಆರೋನನಿಗೆ ನಾದಾಬ್‌ ಅಬೀಹೂ ಎಲ್ಲಾಜರನೂ ಈತಾಮಾರ್‌ ಹುಟ್ಟಿದರು.
61 ಆದರೆ ನಾದಾಬನೂ ಅಬೀಹೂ ಕರ್ತನ ಮುಂದೆ ಅನ್ಯಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು.
62 ಇವರಲ್ಲಿ ಎಣಿಸಲ್ಪಟ್ಟವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಇಪ್ಪತ್ತುಮೂರು ಸಾವಿರ ಮಂದಿಯಾಗಿದ್ದರು. ಇವ ರಿಗೆ ಇಸ್ರಾಯೇಲ್‌ ಮಕ್ಕಳಲ್ಲಿ ಸ್ವಾಸ್ತ್ಯವು ದೊರೆ ಯದ ಕಾರಣ ಅವರು ಇಸ್ರಾಯೇಲ್‌ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ.
63 ಎಣಿಸಲ್ಪಟ್ಟವರಾದ ಇವರನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲ್‌ ಮಕ್ಕ ಳಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್‌ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು.
64 ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್‌ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.
65 ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.