ಜೀಸಸ್, ದೇವರ ಮಗ - ಟ್ರಿನಿಟಿ


  • ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.
    ಆದಿಕಾಂಡ 1:26
  • ಇದ ಲ್ಲದೆ ಕರ್ತನಾದ ದೇವರು--ಇಗೋ, ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು.
    ಆದಿಕಾಂಡ 3:22
  • ಓ ಇಸ್ರಾಯೇಲೇ, ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ ಕರ್ತನು.
    ಧರ್ಮೋಪದೇಶಕಾಂಡ 6:4
  • ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
    ಯೆಶಾಯ 9:6
  • ಕರ್ತನು ಹೇಳುವದೇನಂದರೆ--ನೀವು ನನ್ನ ಸಾಕ್ಷಿಗಳಾಗಿದ್ದೀರಿ; ನಾನೇ ಆತನೆಂದು ನೀವು ತಿಳಿದು ನಂಬಿ ಗ್ರಹಿಸುವ ಹಾಗೆಯೇ ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆ ಯೂ ನನ್ನ ನಂತರದಲ್ಲಿಯೂ ಯಾವ ದೇವರೂ ಇರಲಿಲ್ಲ.
    ಯೆಶಾಯ 43:10
  • ಇಸ್ರಾಯೇಲಿನ ಅರಸನೂ ವಿಮೋಚಕನೂ ಸೈನ್ಯ ಗಳ ಕರ್ತನೂ ಇಂತೆನ್ನುತ್ತಾನೆ--ನಾನೇ ಮೊದಲನೆಯ ವನು, ನಾನೇ ಕಡೆಯವನು, ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.
    ಯೆಶಾಯ 44:6
  • ನನ್ನ ಸವಿಾಪಕ್ಕೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಅಂದಿನಿಂದಲೂ ಅಲ್ಲಿ ನಾನು ಇದ್ದೇನೆ; ಈಗ ದೇವರಾದ ಕರ್ತನು ಆತನ ಆತ್ಮ ದೊಡನೆ ನನ್ನನ್ನು ಕಳುಹಿಸಿದ್ದಾನೆ.
    ಯೆಶಾಯ 48:16
  • ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ
    ಯೆಶಾಯ 61:1
  • ಕಟ್ಟಳೆಯನ್ನು ಸಾರುತ್ತೇನೆ; ಕರ್ತನು ನನಗೆ ಹೇಳಿದ್ದು--ನೀನು ನನ್ನ ಮಗನು, ನಾನು ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.
    ಕೀರ್ತನೆಗಳು 2:7
  • ಕರ್ತನು ನನ್ನ ಕರ್ತನಿಗೆ ಹೇಳಿದ್ದೇನೆಂದರೆ ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲ ಪಾರ್ಶ್ವದಲ್ಲಿ ಕುಳಿತುಕೋ,
    ಕೀರ್ತನೆಗಳು 110:1
  • ಆ ಮಾತೇನಂದರೆ -- ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು; ಅವರು ಆತನ ಹೆಸರನ್ನು ಇಮ್ಮಾನುವೇಲ್‌ ಎಂದು ಕರೆಯುವರು ಎಂಬದೇ. ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ.
    ಮತ್ತಾಯನು 1:23
  • ಯೇಸು ಬಾಪ್ತಿಸ್ಮ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೆ ಇಗೋ, ಆತನಿಗೆ ಆಕಾಶಗಳು ತೆರೆಯಲ್ಪಟ್ಟು ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದುಬರುವದನ್ನು ಆತನು ಕಂಡನು. ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು.
    ಮತ್ತಾಯನು 3:16-17
  • ಆದದರಿಂದ ನೀವು ಹೋಗಿ ಎಲ್ಲಾ ಜನಾಂಗಗಳಿಗೆ ಬೋಧಿಸಿ ತಂದೆಯ, ಮಗನ, ಪರಿಶುದ್ಧಾತ್ಮನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿರಿ;
    ಮತ್ತಾಯನು 28:19
  • ಯೇಸು ಪ್ರತ್ಯುತ್ತರವಾಗಿ ಅವನಿಗೆ--ಎಲ್ಲಾ ದೈವಾಜ್ಞೆಗಳಲ್ಲಿ ಮೊದಲನೆಯದು -- ಓ ಇಸ್ರಾಯೇಲೇ, ಕೇಳು; ನಮ್ಮ ದೇವರಾದ ಕರ್ತನು ಒಬ್ಬನೇ ಕರ್ತನಾಗಿದ್ದಾನೆ.
    ಮಾರ್ಕನು 12:29
  • ಅದಕ್ಕೆ ಆ ಶಾಸ್ತ್ರಿಯು ಆತನಿಗೆ --ಬೋಧಕನೇ, ಒಳ್ಳೇದು. ನೀನು ಸತ್ಯವನ್ನೇ ಹೇಳಿದ್ದೀ; ಯಾಕಂದರೆ ದೇವರು ಒಬ್ಬನೇ; ಆತನ ಹೊರತು ಬೇರೊಬ್ಬನು ಇಲ್ಲವೇ ಇಲ್ಲ.
    ಮಾರ್ಕನು 12:32
  • ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ ಆಕೆಗೆ--ಪವಿತ್ರಾತ್ಮನು ನಿನ್ನ ಮೇಲೆ ಬರುವನು, ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸಿ ಕೊಳ್ಳುವದು; ಆದದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರವಾದ ಶಿಶುವು ದೇವರ ಮಗನೆಂದು ಕರೆಯ ಲ್ಪಡುವನು.
    ಲೂಕನು 1:35
  • ತಂದೆಯೇ, ನಿನ್ನ ಚಿತ್ತವಿದ್ದರೆ ಈ ಪಾತ್ರೆ ಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ಆದರೆ ನಿನ್ನ ಚಿತ್ತದಂತೆಯೇ ಆಗಲಿ ಎಂದು ಪ್ರಾರ್ಥಿಸಿ ದನು.
    ಲೂಕನು 22:42
  • ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು. ಆತನೇ ಆದಿಯಲ್ಲಿ ದೇವರೊಂದಿಗೆ ಇದ್ದನು. ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ.
    ಯೋಹಾನನು 1:1-3
  • ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).
    ಯೋಹಾನನು 1:14
  • ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.
    ಯೋಹಾನನು 1:18
  • ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವ ವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು.
    ಯೋಹಾನನು 4:24
  • ಆದದರಿಂದ ಆತನು ಸಬ್ಬತ್ತನ್ನು ವಿಾರಿದ್ದು ಮಾತ್ರವಲ್ಲದೆ ದೇವರನ್ನು ತನ್ನ ಸ್ವಂತ ತಂದೆ ಎಂದು ಕರೆದು ತನ್ನನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಇನ್ನಷ್ಟು ಪ್ರಯತ್ನ ಮಾಡಿದರು.
    ಯೋಹಾನನು 5:18
  • ಆದದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆನು. ಯಾಕಂದರೆ ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ಹೇಳಿದನು.
    ಯೋಹಾನನು 8:24
  • ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನಿಗಿಂತ ಮುಂಚೆಯೇ ನಾನು ಇದ್ದೇನೆ ಅಂದನು.
    ಯೋಹಾನನು 8:58
  • ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.
    ಯೋಹಾನನು 10:30
  • ಅದಕ್ಕೆ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ಒಳ್ಳೇ ಕಾರ್ಯಗಳಿಗೋಸ್ಕರವಲ್ಲ, ದೇವದೂಷಣೆಗೋಸ್ಕ ರವೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರಾಗಿ ಮಾಡಿಕೊಳ್ಳುವದಕ್ಕೊಸ್ಕರವೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.
    ಯೋಹಾನನು 10:33
  • ಯೇಸು ಅವನಿಗೆ--ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.
    ಯೋಹಾನನು 14:6
  • ಯೇಸು ಅವನಿಗೆ--ಫಿಲಿಪ್ಪನೇ, ನಾನು ನಿಮ್ಮ ಸಂಗಡ ಇಷ್ಟು ಕಾಲ ಇದ್ದರೂ ನೀನು ನನ್ನನ್ನು ತಿಳಿಯಲಿಲ್ಲವೋ? ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ; ಹಾಗಾದರೆ ತಂದೆಯನ್ನು ನಮಗೆ ತೋರಿಸು ಎಂದು ನೀನು ಹೇಳುವದು ಹೇಗೆ? ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂದು ನೀನು ನಂಬುವದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವದಿಲ್ಲ; ಆದರೆ ನನ್ನಲ್ಲಿ ವಾಸಿಸುತ್ತಿರುವ ತಂದೆಯೇ ಆ ಕಾರ್ಯಗಳನ್ನು ಮಾಡುತ್ತಾನೆ. ನಾನು ತಂದೆ ಯಲ್ಲಿದ್ದೇನೆಂತಲೂ ತಂದೆಯು ನನ್ನಲ್ಲಿದ್ದಾನೆಂತಲೂ ನನ್ನನ್ನು ನಂಬಿರಿ. ಇಲ್ಲದಿದ್ದರೆ ಆ ಕ್ರಿಯೆಗಳ ನಿಮಿತ್ತವಾದರೂ ನನ್ನನ್ನು ನಂಬಿರಿ.
    ಯೋಹಾನನು 14:9-11
  • ನಾನು ತಂದೆಯನ್ನು ಬೇಡಿ ಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಆದರಿ ಕನನ್ನು ಸದಾಕಾಲವೂ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆತನು ಸತ್ಯದ ಆತ್ಮನೇ; ಲೋಕವು ಆತನನ್ನು ನೋಡದೆಯೂ ತಿಳಿಯದೆಯೂ ಇರುವದ ರಿಂದ ಆತನನ್ನು ಹೊಂದಲಾರದು. ಆದರೆ ನೀವು ಆತನನ್ನು ಬಲ್ಲಿರಿ. ಯಾಕಂದರೆ ಆತನು ನಿಮ್ಮೊಂದಿಗೆ ವಾಸಿಸುತ್ತಾನೆ ಮತ್ತು ನಿಮ್ಮೊಳಗಿರುವನು.
    ಯೋಹಾನನು 14:16-17
  • ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪರಿಶುದ್ಧಾತ್ಮನೆಂಬ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.
    ಯೋಹಾನನು 14:26
  • ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುವದು ಹೇಗೆ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ; ನೀವು ನನ್ನನ್ನು ಪ್ರೀತಿಸಿದ್ದರೆ ನಾನು ನನ್ನ ತಂದೆಯ ಬಳಿಗೆ ಹೊಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದಿರಿ; ನನ್ನ ತಂದೆಯು ನನಗಿಂತಲೂ ದೊಡ್ಡವನಾಗಿದ್ದಾನೆ.
    ಯೋಹಾನನು 14:28
  • ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆದರಿಕನು ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ ಆತನು ನನ್ನ ವಿಷಯವಾಗಿ ಸಾಕ್ಷಿ ಕೊಡುವನು.
    ಯೋಹಾನನು 15:26
  • ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.
    ಯೋಹಾನನು 17:3
  • ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರುವಂತೆ ನೀನು ನನಗೆ ಕೊಟ್ಟ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ (ಇರುವಂತೆ) ಅವರೂ ಒಂದಾಗಿ ಪರಿಪೂರ್ಣರಾಗಿ ರುವರು; ನೀನು ನನ್ನನ್ನು ಕಳುಹಿಸಿದ್ದೀ ಎಂತಲೂ ನನ್ನನ್ನು ಪ್ರೀತಿ ಮಾಡಿದಂತೆ ಅವರನ್ನು ನೀನು ಪ್ರೀತಿಮಾಡಿದ್ದೀ ಎಂತಲೂ ಲೋಕವು ತಿಳಿದುಕೊಳ್ಳುವದು.
    ಯೋಹಾನನು 17:22-23
  • ಪರಿಶುದ್ಧ ಆತ್ಮಕ್ಕನು ಸಾರವಾಗಿ ಸತ್ತವರೊಳ ಗಿಂದ ಪುನರುತ್ಥಾನ ಹೊಂದುವದರ ಮೂಲಕ ಆತನು ದೇವಕುಮಾರನೆಂದು ಬಲದೊಂದಿಗೆ ಪ್ರಕಟಿಸಲ್ಪ ಟ್ಟನು;
    ರೋಮಾಪುರದವರಿಗೆ 1:4
  • ದೇವರು ಒಬ್ಬನೇ ಆಗಿರಲಾಗಿ ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸು ವದಕ್ಕೆ ಅವರ ನಂಬಿಕೆಯಿಂದಲೇ. ಸುನ್ನತಿಯಿಲ್ಲ ದವರನ್ನು ಹಾಗೆಯೇ ನಿರ್ಣಯಿಸುವದು ನಂಬಿಕೆಯ ಮೂಲಕವೇ.
    ರೋಮಾಪುರದವರಿಗೆ 3:30
  • ಯೇಸುವನ್ನು ಸತ್ತವ ರೊಳಗಿಂದ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿ ದ್ದರೆ ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯ ದೇಹಗಳನ್ನು ಸಹ ಬದುಕಿಸುವನು.
    ರೋಮಾಪುರದವರಿಗೆ 8:11
  • ಆದರೆ ಬರೆದಿರುವ ಪ್ರಕಾರ--ದೇವರು ತನ್ನನ್ನು ಪ್ರೀತಿಸು ವವರಿಗಾಗಿ ಸಿದ್ಧಮಾಡಿರುವಂಥವುಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಇಲ್ಲವೆ ಅವು ಮನುಷ್ಯನ ಹೃದಯದಲ್ಲಿ ಸೇರಲಿಲ್ಲ. ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅವುಗಳನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ಹೌದು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸು ವವನಾಗಿದ್ದಾನೆ.
    1 ಕೊರಿಂಥದವರಿಗೆ 2:9-10
  • ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?
    1 ಕೊರಿಂಥದವರಿಗೆ 3:16
  • ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲ ಕಾರಣನು; ನಾವು ಆತನಲ್ಲಿ ಇದ್ದೇವೆ. ಕರ್ತನಾದ ಯೇಸು ಕ್ರಿಸ್ತನು ಒಬ್ಬನೇ; ಆತನ ಮುಖಾಂತರ ಸಮಸ್ತವೂ ಉಂಟಾಯಿತು; ನಾವು ಆತನ ಮುಖಾಂತರ ಉಂಟಾದೆವು.
    1 ಕೊರಿಂಥದವರಿಗೆ 8:6
  • ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ.
    ಗಲಾತ್ಯದವರಿಗೆ 5:22-23
  • ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು.
    ಎಫೆಸದವರಿಗೆ 2:18
  • ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ, ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.
    ಎಫೆಸದವರಿಗೆ 4:4-6
  • ನಮ್ಮ ತಂದೆ ಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತ ನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
    ಫಿಲಿಪ್ಪಿಯವರಿಗೆ 1:2
  • ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ. ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು.
    ಫಿಲಿಪ್ಪಿಯವರಿಗೆ 2:5-8
  • ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಪ್ರತಿಯೊಂದು ಸೃಷ್ಟಿಗೆ ಜ್ಯೇಷ್ಠನೂ ಆಗಿದ್ದಾನೆ. ಭೂಪರಲೋಕ ಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನ ಗಳಾಗಲಿ ಇಲ್ಲವೆ ಪ್ರಭುತ್ವಗಳಾಗಲಿ ಇಲ್ಲವೆ ದೊರೆ ತನಗಳಾಗಲಿ ಇಲ್ಲವೆ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನಿಂದಲೂ ಆತನಿ ಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲದಕ್ಕೂ ಮೊದಲು ಇದ್ದಾತನು; ಆತನು ಸಮಸ್ತಕ್ಕೂ ಆಧಾರನಾಗಿದ್ದಾನೆ.
    ಕೊಲೊಸ್ಸೆಯವರಿಗೆ 1:15-17
  • ಕ್ರಿಸ್ತನಲ್ಲಿಯೇ ದೈವತ್ವ ಸರ್ವಸಂಪೂರ್ಣತೆಯು ಶಾರೀ ರಕವಾಗಿ ವಾಸಮಾಡುತ್ತದೆ.
    ಕೊಲೊಸ್ಸೆಯವರಿಗೆ 2:9
  • ಕರ್ತನು ನಿಮ್ಮ ಹೃದಯಗಳನ್ನು ದೇವರ ಪ್ರೀತಿಯಲ್ಲಿಯೂ ಕ್ರಿಸ್ತನಿಗಾಗಿ ತಾಳ್ಮೆಯಿಂದ ಕಾದು ಕೊಂಡಿರುವ ಹಾಗೆಯೂ ನಡಿಸಲಿ.
    2 ಥೆಸಲೊನೀಕದವರಿಗೆ 3:5
  • ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ;
    1 ತಿಮೊಥೆಯನಿಗೆ 2:5
  • ಆತನು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತನ್ನ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಕರೆಯಿಂದ ನಮ್ಮನ್ನು ಕರೆದನು. ಆತನು ಜಗದುತ್ಪತ್ತಿಗೆ ಮುಂಚೆಯೇ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದನು.
    2 ತಿಮೊಥೆಯನಿಗೆ 1:9
  • ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ.
    ತೀತನಿಗೆ 2:13
  • ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
    ಇಬ್ರಿಯರಿಗೆ 1:3
  • ಮಗನ ವಿಷಯದಲ್ಲಿಯಾದರೋ--ಓ ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವದು; ನೀತಿದಂಡವೇ ನಿನ್ನ ರಾಜದಂಡವಾಗಿದೆ.
    ಇಬ್ರಿಯರಿಗೆ 1:8
  • ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ.
    ಇಬ್ರಿಯರಿಗೆ 9:14
  • ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.
    ಇಬ್ರಿಯರಿಗೆ 13:8
  • ಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ ಗಲಾತ್ಯ ಕಪ್ಪದೋಕ್ಯ ಆಸ್ಯ ಬಿಥೊನ್ಯ ಇವುಗಳಲ್ಲೆಲ್ಲಾ ಚದರಿರುವ ಪರದೇಶಸ್ಥರಿಗೆ ಪವಿತ್ರಾತ್ಮನಿಂದ ಪ್ರತಿಷ್ಟಿಸಲ್ಪಟ್ಟವರಾಗಿ ವಿಧೇಯರಾ ಗುವದಕ್ಕೂ ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗು ವದಕ್ಕೂ ತಂದೆಯಾದ ದೇವರ ಭವಿಷ್ಯದ್‌ ಜ್ಞಾನಾನು ಸಾರವಾಗಿ ಆರಿಸಿಕೊಳ್ಳಲ್ಪಟ್ಟವರಿಗೆ ಬರೆಯುವದೇ ನಂದರೆ--ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
    1 ಪೇತ್ರನು 1:1-2
  • ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಇರ ಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಸಿದ್ಧಿ ಪಡಿಸುತ್ತೇವೆ. ನಿಜವಾಗಿಯೂ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರು ವಂಥದ್ದು.
    1 ಯೋಹಾನನು 1:3
  • ಪರಲೋಕದಲ್ಲಿ ಸಾಕ್ಷಿಕೊಡುವವರು ಮೂವರಿದ್ದಾರೆ; ಅವರು ಯಾರಂದರೆ ತಂದೆಯು, ವಾಕ್ಯವು ಮತ್ತು ಪರಿಶುದ್ಧಾತ್ಮನು; ಮೂವರಾಗಿರುವ ಇವರು ಒಂದಾಗಿದ್ದಾರೆ. ಆತ್ಮ ನೀರು ರಕ್ತ ಈ ಮೂವರು ಭೂಮಿಯ ಮೇಲೆ ಸಾಕ್ಷಿ ಹೇಳುತ್ತಾರೆ; ಈ ಮೂವರು ಒಂದೇಯಾಗಿ ಒಪ್ಪಿಕೊಳ್ಳುತ್ತಾರೆ.
    1 ಯೋಹಾನನು 5:7-8
  • ದೇವರ ಮಗನು ಬಂದು ನಾವು ಸತ್ಯವಾಗಿರುವಾತ ನನ್ನು ಅರಿತುಕೊಳ್ಳುವ ಹಾಗೆ ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾನೆಂಬದು ನಮಗೆ ಗೊತ್ತದೆ. ನಾವು ಆ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಈತನೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾನೆ.
    1 ಯೋಹಾನನು 5:20
  • ನಾನೇ ಅಲ್ಫಾವೂ ಓಮೆಗವೂ ಆದಿಯೂ ಅಂತ್ಯವೂ ಇರುವಾತನೂ ಇದ್ದಾತನೂ ಮತ್ತು ಬರು ವಾತನೂ ಸರ್ವಶಕ್ತನೂ ಆಗಿದ್ದೇನೆ ಎಂದು ಕರ್ತನು ಹೇಳುತ್ತಾನೆ.
    ಪ್ರಕಟನೆ 1:8