ಬೇರ್ಪಡಿಕೆ


  • ಮಿಚ್ಪಾ ಎಂದೂ ಹೆಸರಾಯಿತು. ಯಾಕಂದರೆ--ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಕರ್ತನು ನಮ್ಮನ್ನು ಕಾಪಾಡಲಿ.
    ಆದಿಕಾಂಡ Genesis 31:49
  • ನಾನು ಕರ್ತನಿಗೆ ಮಾಡಿದ ವಿಜ್ಞಾಪನೆಯಂತೆ ಆತನು ನನಗೆ ಕೊಟ್ಟನು. 28 ಆದದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವ ವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು. ಅವನು ಅಲ್ಲಿ ಕರ್ತನನ್ನು ಆರಾಧಿಸಿದನು.
    1 ಸಮುವೇಲನು 1:27, 28
  • ಹೌದು, ನಾನು ಮರಣದ ನೆರಳಿನ ಕಣಿವೆಯಲ್ಲಿ ನಡೆದರೂ ಕೇಡಿಗೆ ಭಯಪಡೆನು; ಯಾಕಂದರೆ ನೀನು ನನ್ನ ಸಂಗಡ ಇದ್ದೀ; ನಿನ್ನ ಕೋಲೂ ದೊಣ್ಣೆಯೂ ನನ್ನನ್ನು ಆದರಿಸುತ್ತವೆ.
    ಕೀರ್ತನೆಗಳು 23:4
  • ನನ್ನ ತಂದೆತಾಯಂದಿರು ನನ್ನನ್ನು ತೊರೆದುಬಿಟ್ಟರೂ ಕರ್ತನು ನನ್ನನ್ನು ಸೇರಿಸಿಕೊಳ್ಳುತ್ತಾನೆ. ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.
    ಕೀರ್ತನೆಗಳು 27:10
  • ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.
    ಕೀರ್ತನೆಗಳು 34:18
  • ಆತನು ಮುರಿದ ಹೃದಯದವರನ್ನು ಸ್ವಸ್ಥಮಾಡಿ ಅವರ ಗಾಯಗಳನ್ನು ಕಟ್ಟುತ್ತಾನೆ.
    ಕೀರ್ತನೆಗಳು 147:3

  • ಪರಮ ಗೀತ 8:7
  • ಅನೇಕ ಜಲಗಳು ಪ್ರೀತಿಯನ್ನು ಆರಿ ಸಲಾರವು; ಪ್ರವಾಹಗಳು ಅದನ್ನು ಮುಣುಗಿಸ ಲಾರವು; ಮನುಷ್ಯನು ತನ್ನ ಮನೆಯ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೆ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುವದು. ನಾನು ನಿಮ್ಮನ್ನು ಆದರಣೆಯಿಲ್ಲದೆ ಬಿಡುವದಿಲ್ಲ; ನಿಮ್ಮ ಬಳಿಗೆ ನಾನು ಬರುವೆನು.
    ಯೋಹಾನನು 14:18
  • ನಮ್ಮಲ್ಲಿ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಈಗಿನ ಕಾಲದ ಶ್ರಮೆಗಳನ್ನು ಹೋಲಿಸುವದು ಯೋಗ್ಯ ವಲ್ಲವೆಂದು ನಾನು ಎಣಿಸುತ್ತೇನೆ.
    ರೋಮಾಪುರದವರಿಗೆ 8:18
  • ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿ ಆತನು ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಇರುವವರನ್ನು ಸಂತೈಸು ವದಕ್ಕೆ ಶಕ್ತರಾಗುತ್ತೇವೆ.
    2 ಕೊರಿಂಥದವರಿಗೆ 1:4
  • ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
    ಫಿಲಿಪ್ಪಿಯವರಿಗೆ 3:7, 8
  • ಇದಲ್ಲದೆ ಸಹೋದರರೇ, ನಿರೀಕ್ಷೆಯಿಲ್ಲದ ಬೇರೆಯವರ ಹಾಗೆ ದುಃಖಿಸಿದಂತೆ ನಿದ್ರೆಹೋದವರ ವಿಷಯದಲ್ಲಿ ನೀವು ತಿಳಿದಿರಬೇಕೆಂದು ನಾನು ಇಚ್ಚಿಸುತ್ತೇನೆ.
    1 ಥೆಸಲೊನೀಕದವರಿಗೆ 4:13
  • ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.
    1 ಪೇತ್ರನು 1:7
  • ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ.
    ಇಬ್ರಿಯರಿಗೆ 10:36