ಉಳಿದ ರಜಾದಿನಗಳು
- ಕರ್ತನೇ ನನ್ನನ್ನು ಕಾಪಾಡಿದ್ದರಿಂದ ನಾನು ಮಲಗಿ ನಿದ್ದೆಗೈದು ಎಚ್ಚತ್ತೆನು.
ಕೀರ್ತನೆಗಳು 3:5 -
ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ. 5
ಕೀರ್ತನೆಗಳು 4:8 -
ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
ಕೀರ್ತನೆಗಳು 91:5 -
ರೊಟ್ಟಿಗಾಗಿ ವ್ಯಥೆಪಟ್ಟು ಬೆಳಿಗ್ಗೆ ಬೇಗ ಏಳುವದೂ ರಾತ್ರಿ ತಡವಾಗಿ ಮಲಗುವದೂ ವ್ಯರ್ಥವೇ. ಆತನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಅದನ್ನು ಕೊಡುತ್ತಾನೆ.
ಕೀರ್ತನೆಗಳು 127:2 -
ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು.
ಙ್ಞಾನೋಕ್ತಿಗಳು 3:24 -
ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು.
ಪ್ರಸಂಗಿ 5:12 -
ಅವನು ಸಮಾಧಾನಕ್ಕೆ ಪ್ರವೇಶಿಸುತ್ತಾನೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬನು ತನ್ನ ಹಾಸಿಗೆಯಲ್ಲಿ ವಿಶ್ರಮಿಸಿಕೊಳ್ಳುತ್ತಾನೆ.
ಯೆಶಾಯ 57:2 -
ಇದ ಲ್ಲದೆ ಕರ್ತನು ತಾನೇ ದೇವರಾಗಿದ್ದಾನೆ; ಆತನ ಹೊರತು ಬೇರೊಬ್ಬನಿಲ್ಲವೆಂದು ಭೂಲೋಕದ ಜನ ರೆಲ್ಲರೂ ತಿಳಿಯುವ ಹಾಗೆ
1 ಅರಸುಗಳು 8:56 -
ನಿರೀಕ್ಷೆ ಇದೆ ಎಂದು ಭರವಸದಿಂದಿರುವಿ; ಹೌದು, ನೀನು ನಿನ್ನ ಸುತ್ತಲೂ ಅಗೆದು ಭರವಸದಿಂದ ವಿಶ್ರಾಂತಿ ತಕ್ಕೊಳ್ಳುವಿ.
ಯೋಬನು 11:18 -
ಅವನು ಸಮಾಧಾನಕ್ಕೆ ಪ್ರವೇಶಿಸುತ್ತಾನೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬನು ತನ್ನ ಹಾಸಿಗೆಯಲ್ಲಿ ವಿಶ್ರಮಿಸಿಕೊಳ್ಳುತ್ತಾನೆ.
ಯೆಶಾಯ 57:2 -
ನೀನು ಸಬ್ಬತ್ತಿನಲ್ಲಿ ನಿನ್ನ ಕಾಲನ್ನು ಹಿಂದೆಗೆದು, ನನ್ನ ಪರಿಶುದ್ಧ ದಿವಸದಲ್ಲಿ ನಿನ್ನ ಇಷ್ಟ ವನ್ನು ಮಾಡದೇ ಹೋದರೆ ಸಬ್ಬತ್ತನ್ನು ಆನಂದಕರ ವಾದದ್ದೆಂದೂ ಕರ್ತನ ಪರಿಶುದ್ಧ ದಿವಸವನ್ನು ಘನವುಳ್ಳದ್ದೆಂದೂ ಕರೆದರೆ, ಸ್ವಂತ ಕೆಲಸಗಳನ್ನು ಮಾಡದೆ ಸ್ವಂತ ಇಷ್ಟವನ್ನು ಕಂಡುಕೊಳ್ಳದೆ, ಸ್ವಂತ ಮಾತುಗಳನ್ನು ಆಡದೆ, ಅದನ್ನು ಘನಪಡಿಸಿದರೆ, ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ.
ಯೆಶಾಯ 58:13, 14 -
ಆದದರಿಂದ ನೀವು ತಿಂದರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.
1 ಕೊರಿಂಥದವರಿಗೆ 10:31 -
ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು. ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೊ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.
ಇಬ್ರಿಯರಿಗೆ 4:9, 10