ಪ್ರೋತ್ಸಾಹ

+
 • markup will be injected here -->
 • 0:00
  0:00

  • ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ. ಕೀರ್ತನೆಗಳು 34:18
  • ಕರ್ತನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನಲ್ಲಿ ಭರವಸವಿಡುವವರು ಹಾಳಾಗುವದಿಲ್ಲ. ಕೀರ್ತನೆಗಳು 34:22
  • ಅವನು ಬಿದ್ದು ಹೋದಾಗ್ಯೂ ಪೂರ್ಣ ವಾಗಿ ಕೆಡವಲ್ಪಡುವದಿಲ್ಲ. ಯಾಕಂದರೆ ಕರ್ತನು ತನ್ನ ಕೈಯಿಂದ ಅವನನ್ನು ಮೇಲೆ ಎತ್ತುತ್ತಾನೆ. ಕೀರ್ತನೆಗಳು 37:24
  • ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ. 21 ನೀನು ನನ್ನ ಗೌರವವನ್ನು ಹೆಚ್ಚಿಸಿ ಎಲ್ಲಾ ಕಡೆಯಿಂದಲೂ ನನ್ನನ್ನು ಆದರಿಸುವಿ. ಕೀರ್ತನೆಗಳು 71:20, 21
  • ನನ್ನ ಚಿಂತೆಗಳು ಅಂತರಂಗದಲ್ಲಿ ಹೆಚ್ಚುವಾಗ ನಿನ್ನ ಆದರಣೆಗಳು ನನ್ನ ಪ್ರಾಣವನ್ನು ಆನಂದಪಡಿಸುತ್ತವೆ. ಕೀರ್ತನೆಗಳು 94:19
  • ನನ್ನ ಸಂಕಷ್ಟದಲ್ಲಿ ಇದೇ ನನ್ನ ಆದರಣೆಯು; ಯಾಕಂದರೆ ನಿನ್ನ ವಾಕ್ಯವು ನನ್ನನ್ನು ಬದುಕಿಸಿತು. ಕೀರ್ತನೆಗಳು 119: 50
  • ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ ನೀನು ನನ್ನನ್ನು ಬದುಕಿಸಿ ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿನ್ನ ಕೈಯನ್ನು ಚಾಚುತ್ತೀ; ನಿನ್ನ ಬಲಗೈ ನನ್ನನ್ನು ರಕ್ಷಿಸುತ್ತದೆ. ಕೀರ್ತನೆಗಳು 138:7
  • ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ ನೀನು ನನ್ನ ದಾರಿಯನ್ನು ತಿಳುಕೊಂಡಿದ್ದೀ; ನಾನು ನಡೆಯುವ ದಾರಿಯಲ್ಲಿ ಗುಪ್ತವಾಗಿ ನನಗೆ ಉರ್ಲನ್ನು ಒಡ್ಡಿದ್ದಾರೆ. ಕೀರ್ತನೆಗಳು 142:3
  • ನೀನು ದೀನರಿಗೆ ಕೋಟೆಯೂ ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ ಭೀಕರರ ಶ್ವಾಸವು ಬಿಸಿಲಿಗೋಸ್ಕರ ನೆರಳೂ ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋ ಸ್ಕರ ಆಶ್ರಯವೂ ಆಗಿದ್ದೀ. ಯೆಶಾಯ 25:4
  • ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ. ಯೆಶಾಯ 41:10
  • ಬ ಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್‌ ದೇವ ರಾಗಿರುವ ನಾನು ಅವರನ್ನು ಕೈಬಿಡೆನು. ಯೆಶಾಯ 41:17
  • ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ. ಯೆಶಾಯ 41:18
  • ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು. ಯೆಶಾಯ 61:3
  • ಕರ್ತನು ಎಂದೆಂದಿಗೂ ತಳ್ಳಿಬಿಡುವದಿಲ್ಲ; ಆತನು ದುಃಖಪಡಿಸಿದರೂ ತನ್ನ ಕೃಪಾತಿಶಯದಿಂದ ಕನಿಕರಿಸುವನು. ಆತನು ಇಷ್ಟಪೂರ್ವಕವಾಗಿ ಮನುಷ್ಯರ ಮಕ್ಕಳನ್ನು ಬಾಧಿಸುವದು ಇಲ್ಲ ದುಃಖಿಸು ವದೂ ಇಲ್ಲ. ಪ್ರಲಾಪಗಳು 3:31-33
  • ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯ ಲ್ಪಟ್ಟು ಆತನನ್ನು ಪ್ರಿತಿಸುವವರ ಒಳ್ಳೇದಕ್ಕಾಗಿ ಎಲ್ಲವು ಗಳು ಒಟ್ಟಾಗಿ ಸಂಭವಿಸುತ್ತವೆಯೆಂದು ನಾವು ಬಲ್ಲೆವು. ರೋಮಾಪುರದವರಿಗೆ 8:28
  • ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ಯೇಸು ಕ್ರಿಸ್ತನ ದಿನದವರೆಗೆ ಸಿದ್ದಿಗೆ ತರುವನೆಂದು ನನಗೆ ಭರವಸ ವುಂಟು. ಫಿಲಿಪ್ಪಿಯವರಿಗೆ 1:6
  • ನಾವು ಬಾಧೆಪಡುವವರಾಗಿದ್ದರೆ ಆತನೊಂದಿಗೆ ನಾವು ಸಹ ಆಳುವೆವು; ಆತನನ್ನು ಅಲ್ಲಗಳೆದರೆ ಆತನು ಸಹ ನಮ್ಮನ್ನು ಅಲ್ಲಗಳೆಯುವನು. 2 ತಿಮೊಥೆಯನಿಗೆ 2:12