ರಕ್ಷಣೆ


 • ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ. ಯಾಜಕಕಾಂಡ 25:18
 • ಅವನು ಬೆನ್ಯಾವಿಾನನ ವಿಷಯವಾಗಿ--ಕರ್ತ ನಿಗೆ ಪ್ರಿಯನು ಸುರಕ್ಷಿತವಾಗಿ ಆತನ ಬಳಿಯಲ್ಲಿ ವಾಸ ಮಾಡುವನು; ಆತನು ಅವನಿಗೆ ದಿನವೆಲ್ಲಾ ಮರೆಯಾಗಿ ರುವನು; ಅವನು ಆತನ ಹೆಗಲುಗಳ ನಡುವೆ ವಾಸ ಮಾಡುವನು ಅಂದನು. ಧರ್ಮೋಪದೇಶಕಾಂಡ 33:12
 • ಆದಕಾರಣ ಈಗ ನಿನ್ನ ದಾಸನ ಮನೆಯು ನಿನ್ನ ಮುಂದೆ ಸದಾಕಾಲಕ್ಕೂ ಇರುವ ಹಾಗೆ ಅದನ್ನು ಆಶೀರ್ವದಿಸಲು ನಿನ್ನ ಚಿತ್ತವಾಗಿರಲಿ, ಯಾಕಂದರೆ ಓ ಕರ್ತನಾದ ದೇವರೇ, ನೀನು ಅದನ್ನು ಹೇಳಿದಿ; ನಿನ್ನ ದಾಸನ ಮನೆಯು ಸದಾಕಾಲವೂ ನಿನ್ನ ಆಶೀರ್ವಾದದಿಂದ ಆಶೀರ್ವದಿಸಲ್ಪಟ್ಟಿರಲಿ ಎಂದು ಹೇಳಿದನು. 2 ಸಮುವೇಲನು 7:29
 • ತರುವಾಯ ಕಾವಲುದಂಡುಗಳನ್ನು ದಾವೀದನು ದಮಸ್ಕಕ್ಕೆ ಹೊಂದಿದ ಅರಾಮ್ಯದ ಠಾಣ ಗಳಲ್ಲಿ ಇಟ್ಟನು. ಹಾಗೆಯೇ ಅರಾಮ್ಯರು ದಾವೀದ ನಿಗೆ ದಾಸರಾಗಿ ಕಪ್ಪಗಳನ್ನು ತಂದರು; ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿ ದನು. 2 ಸಮುವೇಲನು 8:6
 • ನೀನು ಎಲ್ಲಿಗೆ ಹೋದರೂ ಅಲ್ಲಿ ನಿನ್ನ ಸಂಗಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಸಂಹರಿಸಿ ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ಹೆಸರನ್ನು ನಿನಗೆ ಉಂಟುಮಾಡಿದೆನು. 1 ಪೂರ್ವಕಾಲವೃತ್ತಾ 17:8
 • ಅರಸನು ಕರ್ತನಲ್ಲಿ ಭರವಸವಿಡುತ್ತಾನೆ; ಮಹೋನ್ನತನ ಕೃಪೆ ಯಿಂದ ಅವನು ಕದಲದೆ ಇರುವನು. ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು. ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು. ಕೀರ್ತನೆಗಳು 21:7-9
 • ಆದರೆ ಅರಸನು ದೇವರಲ್ಲಿ ಸಂತೋಷಿಸುವನು; ಆತನ ಮೇಲೆ ಆಣೆ ಇಡುವ ವರೆಲ್ಲರು ಹೆಚ್ಚಳಪಡುವರು; ಆದರೆ ಸುಳ್ಳಾಡುವವರ ಬಾಯಿ ಮುಚ್ಚಲ್ಪಡುವದು. ಕೀರ್ತನೆಗಳು 63:11
 • ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ. ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ. ಕೀರ್ತನೆಗಳು 132:17, 18
 • ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ, ಕೀರ್ತನೆಗಳು 144:10
 • ನಿತ್ಯನಾದ ದೇವರು ನಿನ್ನ ಆಶ್ರಯವು; ಆತನ ನಿತ್ಯವಾದ ತೋಳುಗಳು ಕೆಳಗಿವೆ, ಶತ್ರುವನ್ನು ನಿನ್ನ ಮುಂದೆ ಹೊರಡಿಸಿ--ಅವರನ್ನು ನಾಶಮಾಡು ಎಂದು ಹೇಳುವನು. ಧರ್ಮೋಪದೇಶಕಾಂಡ 33:27
 • ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ. ಕೀರ್ತನೆಗಳು 4:8
 • ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು. ಕೀರ್ತನೆಗಳು 16:8
 • ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ. ಕೀರ್ತನೆಗಳು 34:7
 • ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. ಕೀರ್ತನೆಗಳು 46:1
 • ಮಹೋನ್ನತನಾದ ಕರ್ತನನ್ನು ನಿನ್ನ ಆಶ್ರಯ ವಾಗಿಯೂ ನಿವಾಸಸ್ಥಾನವಾಗಿಯೂ ಮಾಡಿಕೊಂಡ ದ್ದರಿಂದ 10 ಕೇಡು ನಿನ್ನನ್ನು ಮುಟ್ಟದು; ಯಾವ ವ್ಯಾಧಿಯೂ ನಿನ್ನ ನಿವಾಸಕ್ಕೆ ಸವಿಾಪಿಸದು. ಕೀರ್ತನೆಗಳು 91:9, 10
 • ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ. ಕೀರ್ತನೆಗಳು 127:1
 • ಕರ್ತನೇ ನಿನಗೆ ಭರವಸನಾಗಿದ್ದು ನಿನ್ನ ಪಾದವು ತೆಗೆಯಲ್ಪಡ ದಂತೆ ಆತನು ಕಾಪಾಡುವನು. ಙ್ಞಾನೋಕ್ತಿಗಳು 3:26
 • ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು. ಙ್ಞಾನೋಕ್ತಿಗಳು 14:26
 • ಕರ್ತನ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುತ್ತಾನೆ. ಙ್ಞಾನೋಕ್ತಿಗಳು 18:10
 • ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ. ಙ್ಞಾನೋಕ್ತಿಗಳು 21:31
 • ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ. ಙ್ಞಾನೋಕ್ತಿಗಳು 30:5
 • ನಿಶ್ಚಯ ವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಮರ್ಮ ವನ್ನು ತಿಳಿಸದೆ ಕರ್ತನಾದ ದೇವರು ಏನನ್ನೂ ಮಾಡು ವದಿಲ್ಲ. ಆಮೋಸ 3:7
 • ನೀವು ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧ ಗಳನ್ನು ಧರಿಸಿಕೊಳ್ಳಿರಿ. ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ದುಷ್ಟತನದ ಮೇಲೆಯೂ ಹೋರಾಡುವವರಾಗಿದ್ದೇವೆ. ಎಫೆಸದವರಿಗೆ 6:11, 12