ಬೆಳವಣಿಗೆ


  • ಆದರೆ ನಾನು ಹಿಡಿಯುವ ಮಾರ್ಗವನ್ನು ಆತನು ತಿಳಿದಿದ್ದಾನೆ, ನನ್ನನ್ನು ಶೋಧಿಸಿದಾಗ ನಾನು ಬಂಗಾರದ ಹಾಗೆ ಹೊರಗೆ ಬರುವೆನು.
    ಯೋಬನು 23:10
  • ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು.
    ಙ್ಞಾನೋಕ್ತಿಗಳು 3:12
  • ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು; ಆಗ ಕುಂಬಾರನಿಗೆ ಒಳ್ಳೇದೆಂದು ತೋರುವ ಪ್ರಕಾರ ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು.
    ಯೆರೆಮಿಯ 18:4
  • ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವದೋ? ನಿನ್ನ ಕೈಗಳು ಬಲವಾಗಿರುವವೋ? ಕರ್ತನಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುತ್ತೇನೆ.
    ಯೆಹೆಜ್ಕೇಲನು 22:14
  • ಆದದರಿಂದ ಯಾವನಾದರೂ ನಾನು ಹೇಳುವ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಹೋಲಿಸುವೆನು.
    ಮತ್ತಾಯನು 7:24
  • ಇಲ್ಲವೆ ಹೊಸ ದ್ರಾಕ್ಷಾರಸವನ್ನು ಹಳೇ ಬುದ್ದಲಿಗಳಲ್ಲಿ ಜನರು ಹಾಕುವದಿಲ್ಲ; ಹಾಕಿದರೆ ಅವು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗಿ ಬುದ್ದಲಿಗಳು ನಾಶವಾಗುವವು; ಆದರೆ ಅವರು ಹೊಸ ದ್ರಾಕ್ಷಾ ರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕುವರು; ಆಗ ಅವೆರಡೂ ಭದ್ರವಾಗಿರುವವು ಅಂದನು.
    ಮತ್ತಾಯನು 9:17
  • ಆದರೆ ಪೆಟ್ಟುಗಳಿಗೆ ಯೋಗ್ಯವಾದವುಗಳನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳನ್ನು ತಿನ್ನುವನು. ಯಾಕಂದರೆ ಯಾವನಿಗೆ ಹೆಚ್ಚುಕೊಡಲ್ಪಟ್ಟಿದೆಯೋ ಅವನಿಂದ ಹೆಚ್ಚು ಕೇಳಲ್ಪಡು ವದು; ಯಾವನಿಗೆ ಮನುಷ್ಯರು ಹೆಚ್ಚಾಗಿ ಒಪ್ಪಿಸಿರುವರೋ ಅವನಿಂದ ಅವರು ಹೆಚ್ಚಾಗಿ ಕೇಳುವ
    ಲೂಕನು 12:48
  • ತರುವಾಯ ಕರ್ತನು--ಸೀಮೋನನೇ, ಸೀಮೋ ನನೇ, ಇಗೋ, ಸೈತಾನನು ನಿಮ್ಮನ್ನು ಗೋಧಿಯಂತೆ ಒನೆಯಬೇಕೆಂದು ಅಪೇಕ್ಷೆಪಟ್ಟಿದ್ದಾನೆ. ಆದರೆ ನಿನ್ನ ನಂಬಿಕೆಯು ಬಿದ್ದುಹೋಗದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ; ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು ಎಂದು ಹೇಳಿದನು.
    ಲೂಕನು 22:31, 32
  • ಆತನು ಹೆಚ್ಚಿಸಲ್ಪ ಡತಕ್ಕದ್ದು; ನಾನು ತಗ್ಗಿಸಲ್ಪಡತಕ್ಕದ್ದು.
    ಯೋಹಾನನು 3:30
  • ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯ ದಿದ್ದರೆ ಅದು ಒಂದೇ ಆಗಿ ಉಳಿಯುವದು; ಅದು ಸತ್ತಮೇಲೆ ಬಹಳ ಫಲಕೊಡುವದು.
    ಯೋಹಾನನು 12:24
  • ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.
    ಯೋಹಾನನು 15:2
  • ನನ್ನಲ್ಲಿ ನೆಲೆಗೊಂಡಿರ್ರಿ, ನಾನು ನಿಮ್ಮಲ್ಲಿ ನೆಲೆ ಗೊಂಡಿರುವೆನು. ಕೊಂಬೆಯು ದ್ರಾಕ್ಷೇಯಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.
    ಯೋಹಾನನು 15:4
  • ಇಲ್ಲವೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಳಪಡಿಸುವವರಾಗಿದ್ದು ಅನೀತಿಯನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿಸುವವರೋ ಎಂಬಂತೆ ನೀತಿಕಾರ್ಯಗಳನ್ನು ನಡಿಸುವ ಸಾಧನಗಳನ್ನಾಗಿ ನಿಮ್ಮ ಅಂಗಗಳನ್ನು ದೇವರಿಗೆ ಒಳಪಡಿಸಿರಿ.
    ರೋಮಾಪುರದವರಿಗೆ 6:13
  • ಆದದರಿಂದ ಸಹೋದರರೇ, ನೀವು ನಿಮ್ಮ ದೇಹಗಳನ್ನು ಪರಿಶುದ್ಧವೂ ದೇವರಿಗೆ ಮೆಚ್ಚಿಕೆಯೂ ಆಗಿರುವ ಸಜೀವಯಜ್ಞವಾಗಿ ಸಮರ್ಪಿಸ ಬೇಕೆಂದು ದೇವರ ಕರುಣೆಯಿಂದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಇದೇ ನಿಮ್ಮ ಯೋಗ್ಯವಾದ ಸೇವೆ ಯಾಗಿದೆ. ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.
    ರೋಮಾಪುರದವರಿಗೆ 12:1, 2
  • ಈ ಕಾರಣದಿಂದ ನಾವು ಧೈರ್ಯಗೆಡುವದಿಲ್ಲ; ಆದರೆ ನಮ್ಮ ಹೊರಮನುಷ್ಯನು ನಾಶವಾಗುತಾ ಇದ್ದರೂ ನಮ್ಮ ಒಳಮನುಷ್ಯನು ದಿನೇದಿನೇ ಹೊಸಬ ನಾಗುತ್ತಾ ಇರುವನು. ಹೇಗಂದರೆ ಕ್ಷಣಮಾತ್ರ ವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕ ವಾದ ಮತ್ತು ನಿರಂತರವಾಗಿರುವ ಗೌರವವುಳ್ಳ ಮಹಿಮೆಯನ್ನುಂಟು ಮಾಡುತ್ತದೆ.
    2 ಕೊರಿಂಥದವರಿಗೆ 4:16, 17
  • ಮನುಷ್ಯನಿಗೆ ಸಾಮಾನ್ಯ ವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ; ಆದರೆ ದೇವರು ನಂಬಿಗಸ್ತನು; ನೀವು ಸಹಿಸುವದಕ್ಕಿಂತ ಹೆಚ್ಚಿನ ಶೋಧನೆಯನ್ನು ಆತನು ನಿಮಗೆ ಬರಮಾಡುವದಿಲ್ಲ; ಆದರೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧ
    1 ಕೊರಿಂಥದವರಿಗೆ 10:13
  • ನಾವು ಶರೀರದಲ್ಲಿ ನಡ ಕೊಳ್ಳುವವರಾದರೂ ಶರೀರ ಪ್ರಕಾರವಾಗಿ ಯುದ್ಧ ಮಾಡುವವರಲ್ಲ. (ನಾವು ಉಪಯೋಗಿಸುವ ಯುದ್ಧಾಯುಧಗಳು ಶರೀರ ಸಂಬಂಧವಾದ ಆಯುಧ ಗಳಲ್ಲ; ಅವು ದೇವರ ಮೂಲಕ ಬಲವಾಗಿದ್ದು ಬಲ ವಾದ ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ).
    2 ಕೊರಿಂಥದವರಿಗೆ 10:3, 4
  • ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು. 10 ಆದದರಿಂದ ನಾನು ಕ್ರಿಸ್ತನ ನಿಮಿತ್ತ ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ; ಯಾಕಂದರೆ ನಾನು ಯಾವಾಗ ನಿರ್ಬಲ ನಾಗಿದ್ದೇನೋ ಅವಾಗಲೇ ಬಲವುಳ್ಳವನಾಗಿದ್ದೇನೆ.
    2 ಕೊರಿಂಥದವರಿಗೆ 12:9, 10
  • ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ಯೇಸು ಕ್ರಿಸ್ತನ ದಿನದವರೆಗೆ ಸಿದ್ದಿಗೆ ತರುವನೆಂದು ನನಗೆ ಭರವಸ ವುಂಟು.
    ಫಿಲಿಪ್ಪಿಯವರಿಗೆ 1:6
  • ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ನೀನು ಕರೆಯಲ್ಪಟ್ಟಿದ್ದೀ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೇ ಅರಿಕೆಯನ್ನು ಮಾಡಿದ್ದೀಯಲ್ಲಾ.
    1 ತಿಮೊಥೆಯನಿಗೆ 6:12
  • ಆದದರಿಂದ ನೀನು ಯೇಸು ಕ್ರಿಸ್ತನ ಒಳ್ಳೇ ಸೈನಿಕನಂತೆ ಶ್ರಮೆಯನ್ನ ನುಭವಿಸು.
    2 ತಿಮೊಥೆಯನಿಗೆ 2:3
  • ನನ್ನ ಸಹೋದರರೇ, ನೀವು ನಾನಾವಿಧವಾದ ಸಂಕಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದ ಕರವಾದದ್ದೆಂದು ಎಣಿಸಿರಿ. ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.
    ಯಾಕೋಬನು 1:2, 3
  • ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.
    ಯಾಕೋಬನು 4:7
  • ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ಕಷ್ಟಗಳಲ್ಲಿ ದುಃಖಿಸುವವ ರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ. ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ
    1 ಪೇತ್ರನು 1:6, 7
  • ಪ್ರಿಯರೇ, ನಿಮ್ಮನ್ನು ಶೋಧಿಸುವದಕ್ಕೆ ಅಗ್ನಿ ಯಂತಿರುವ ಪರಿಶೋಧನೆಗಾಗಿ ನೀವು ಆಶ್ಚರ್ಯಪಡ ಬೇಡಿರಿ; ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿ ತೆಂದು ಯೋಚಿಸಬೇಡಿರಿ. ನೀವು ಕ್ರಿಸ್ತನ ಬಾಧೆ ಗಳಲ್ಲಿ ಪಾಲುಗಾರರಾಗಿರುವದರಿಂದ ಸಂತೋಷವುಳ್ಳ ವರಾಗಿರ್ರಿ; ಇದಲ್ಲದೆ ಆತನ ಮಹಿಮೆಯ ಪ್ರತ್ಯಕ್ಷತೆ ಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.
    1 ಪೇತ್ರನು 4:12, 13
  • ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
    ಕೀರ್ತನೆಗಳು 40:3
  • ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
    ಯೆಹೆಜ್ಕೇಲನು 36:26
  • ಹೀಗಿರಲಾಗಿ ನಾವು ಬಾಪ್ತಿಸ್ಮ ಮಾಡಿಸಿ ಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗು ವದಕ್ಕೆ ಆತನೊಂದಿಗೆ ಹೂಣಲ್ಪಟ್ಟೆವು; ಕ್ರಿಸ್ತನು ತಂದೆಯ ಮಹಿಮೆಯಿಂದ ಹೇಗೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೋ ಹಾಗೆಯೇ ನಾವು ಕೂಡ ಜೀವ ದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.
    ರೋಮಾಪುರದವರಿಗೆ 6:4
  • ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು.
    2 ಕೊರಿಂಥದವರಿಗೆ 5:17
  • ನೀವು ನಿಮ್ಮ ಮನಸ್ಸಿನಭಾವದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ನೀತಿಯಲ್ಲಿಯೂ ನಿಜವಾದ ಪರಿಶುದ್ಧತೆಯಲ್ಲಿಯೂ ನಿರ್ಮಿಸಲ್ಪಟ್ಟಿದೆ.
    ಎಫೆಸದವರಿಗೆ 4:23, 24
  • ಸಹೋದರರೇ, ನಾನಂತೂ ಹಿಡಿದುಕೊಂಡವ ನೆಂದು ನನ್ನನ್ನು ಎಣಿಸಿಕೊಳ್ಳುವದಿಲ್ಲ; ಆದರೆ ಇದೊಂ ದನ್ನು ಮಾಡುತ್ತೇನೆ, ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ದೇವರ ಉನ್ನತವಾದ ಕರೆಯುವಿಕೆಯ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
    ಫಿಲಿಪ್ಪಿಯವರಿಗೆ 3:13, 14