ಪೂರೈಕೆ


  • ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ. - 1
    1 ತಿಮೊಥೆಯನಿಗೆ 6:10
  • ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.
    ಮತ್ತಾಯನು 6:33
  • ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ. 9 ಇದರ ಮೂಲಕ ಶಪಿಸಲ್ಪಟ್ಟಿ; ನೀವು, ಹೌದು, ಈ ಸಮಸ್ತ ಜನಾಂಗವೇ ನನ್ನದನ್ನು ಕಳ್ಳತನ ಮಾಡಿದ್ದೀರಿ. 10 ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು
    ಮಲಾಕಿಯ 3:8-10
  • ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು.
    ಫಿಲಿಪ್ಪಿಯವರಿಗೆ 4:19
  • ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ; ಆದರೆ ನೀತಿವಂತನು ಕೈಬಿಡಲ್ಪಟ್ಟದ್ದನ್ನೂ ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆಬೇಡುವದನ್ನೂ ನಾನು ನೋಡಲಿಲ್ಲ.
    ಕೀರ್ತನೆಗಳು 37:25
  • ನಾವು ಆತನ ಚಿತ್ತಾನುಸಾರ ವಾಗಿ ಏನಾದರೂ ಬೇಡಿಕೊಂಡರೆ ಆತನು ಕೇಳು ತ್ತಾನೆಂಬ ಭರವಸವು ಆತನಲ್ಲಿ ನಮಗುಂಟು. ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಆಶಿಸಿದವುಗಳು ಆತನಿಂದ ನಮಗೆ ದೊರೆತವೆಂಬದು ನಮಗೆ ತಿಳಿದದೆ. .
    1 ಯೋಹಾನನು 5:14, 15
  • ಕರ್ತನು ನನ್ನ ಕುರುಬನು; ಕೊರತೆಪಡೆನು.
    ಕೀರ್ತನೆಗಳು 23:1
  • ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ.
    ಕೀರ್ತನೆಗಳು 34:10
  • ಪ್ರತಿ ದಿನವೂ ನಮ್ಮನ್ನು ಮೇಲುಗಳಿಂದ ತುಂಬಿಸು,ಕರ್ತನು ಅಂದರೆ ನಮ್ಮ ರಕ್ಷಣೆಯ ದೇವರು ಸ್ತುತಿ ಹೊಂದಲಿ. ಸೆಲಾ.
    ಕೀರ್ತನೆಗಳು 68:19
  • ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.
    ಕೀರ್ತನೆಗಳು 81:10
  • ದೇವರಾದ ಕರ್ತನು ಸೂರ್ಯ ನೂ ಗುರಾಣಿಯೂ ಆಗಿದ್ದಾನೆ; ಕರ್ತನು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾನೆ; ಸಂಪೂರ್ಣವಾಗಿ ನಡೆದುಕೊಳ್ಳುವವರಿಗೆ ಆತನು ಯಾವ ಒಳ್ಳೇದನ್ನು ಹಿಂದೆಗೆಯುವದಿಲ್ಲ.
    ಕೀರ್ತನೆಗಳು 84:11
  • ಎಲ್ಲರ ಕಣ್ಣುಗಳು ನಿನಗೆ ಕಾದುಕೊಳ್ಳುತ್ತವೆ; ನೀನು ಅವರಿಗೆ ಅವರ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀ. ನಿನ್ನ ಕೈ ತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ತೃಪ್ತಿಪಡಿ ಸುತ್ತೀ.
    ಕೀರ್ತನೆಗಳು 145:15, 16
  • ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.
    ಙ್ಞಾನೋಕ್ತಿಗಳು 13:25
  • ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ; 20 ನೀವು ತಿರಸ್ಕರಿಸಿ ತಿರುಗಿಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಕರ್ತನ ಬಾಯಿಯೇ ಇದನ್ನು ನುಡಿದಿದೆ.
    ಯೆಶಾಯ 1:19, 20
  • ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು
    ಯೆಹೆಜ್ಕೇಲನು 34:26
  • ಆದದರಿಂದ ನೀವು ಅವರಂತೆ ಇರಬೇಡಿರಿ; ನಿಮ್ಮ ತಂದೆಯನ್ನು ಕೇಳುವದಕ್ಕಿಂತ ಮುಂಚೆಯೇ ನಿಮಗೆ ಅಗತ್ಯವಾಗಿ ರುವವುಗಳು ಯಾವವು ಎಂಬದು ಆತನಿಗೆ ತಿಳಿದದೆ.
    ಮತ್ತಾಯನು 6:8
  • ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು. ಯಾಕಂದರೆ ಬೇಡಿ ಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು; ಮತ್ತು ಹುಡುಕುವವನಿಗೆ ಸಿಕ್ಕುವದು; ಇದಲ್ಲದೆ ತಟ್ಟುವವನಿಗೆ ತೆರೆಯಲ್ಪಡುವದು.
    ಮತ್ತಾಯನು 7:7, 8
  • ಕೆಟ್ಟವರಾದ ನೀವು ಒಳ್ಳೇ ದಾನಗಳನ್ನು ನಿಮ್ಮ ಮಕ್ಕಳಿಗೆ ಕೊಡುವದು ಹೇಗೆ ಎಂಬದನ್ನು ತಿಳಿದವರಾಗಿದ್ದರೆ ಪರಲೋಕ ದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳು ವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯವುಗಳನ್ನು ಕೊಡುತ್ತಾನಲ್ಲವೇ?
    ಮತ್ತಾಯನು 7:11
  • ನೀವು ನಂಬುವವ ರಾಗಿ ಪ್ರಾರ್ಥನೆಯಲ್ಲಿ ಏನೇನೂ ಕೇಳುವಿರೋ ಅವುಗಳನ್ನೆಲ್ಲಾ ಹೊಂದುವಿರಿ ಅಂದನು.
    ಮತ್ತಾಯನು 21:22
  • ಆತನು ಅವರಿಗೆ--ನಾನು ನಿಮ್ಮನ್ನು ಹವ್ಮೆಾಣಿ ಚೀಲ ಮತ್ತು ಕೆರಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ ಎಂದು ಕೇಳಲು ಅವರು--ಏನೂ ಇಲ್ಲ ಅಂದರು.
    ಲೂಕನು 22:35
  • ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ಜೀವನ ಮಾಡ ಬೇಕೆಂದು ಕರ್ತನು ನೇಮಿಸಿದನು.
    1 ಕೊರಿಂಥದವರಿಗೆ 9:14
  • ನಾವು ಏನೇನು ಬೇಡಿಕೊಳ್ಳುತ್ತೇವೋ ಆತನಿಂದ ನಾವು ಹೊಂದಿಕೊಳ್ಳುತ್ತೇವೆ. ಯಾಕಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ದೃಷ್ಟಿಯಲ್ಲಿ ಮೆಚ್ಚಿಕೆಯಾದವುಗಳನ್ನು ಮಾಡುವವರಾಗಿದ್ದೇವೆ.
    1 ಯೋಹಾನನು 3:22